ಬೆಂಗಳೂರಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ನ.24 ರಂದು 2 ನೇ ಕಾನೂನು ಮತ್ತು ಸ್ವಾತಂತ್ರ್ಯ (Law and liberty) ಸಮ್ಮೇಳನ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10:00 ರಿಂದ 6 ರ ವರೆಗೆ ನಡೆಯಲಿದೆ. ಡಿಜಿಟಲೀಕರಣಗೊಂಡಿರುವ ಭಾರತದಲ್ಲಿ ಸ್ವಾತಂತ್ರ್ಯದ ಕುರಿತ ದೃಷ್ಟಿಕೋನಗಳು (perspective on liberty in a digitized india) ಎಂಬ ವಿಷಯದ ಬಗ್ಗೆ ಸಮ್ಮೇಳನ ಆಯೋಜನೆಗೊಂಡಿದೆ.
ರಿಲಾಯನ್ಸ್ ಜಿಯೋದ ಉಪಾಧ್ಯಕ್ಷ ಆರ್ ವಿ ಬಾಲಸುಬ್ರಹ್ಮಣಿಯಮ್ ಅಯ್ಯರ್, ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ (ಸಿಸಿಐ) ನ ಮಾಜಿ ಸದಸ್ಯರಾದ ಗೀತಾ ಗೌರಿ, ಉಬರ್ ಸೌತ್ ಪಾಲಿಸಿ ಲೀಡ್ ರಂಜನಾ ಮೆನನ್, ಪತ್ರಕರ್ತ, ಬರಹಗಾರ ಶಂಕರ್ ಅಯ್ಯರ್ ಎಝೆಡ್ ಬಿ ಆ್ಯಂಡ್ ಪಾರ್ಟ್ನರ್ಸ್ ನ ಚೇತನ್ ನಾಗೇಂದ್ರ, ಸಿಸ್ಕೋದ ನಿರ್ದೇಶಕ ಮತ್ತು ಕಾನೂನು ವಿಭಾಗದ ಮುಖ್ಯಸ್ಥ ನವನೀತ್ ಹೃಷಿಕೇಶನ್, ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಚಿನ್ಮಯಿ ಅರುಣ್, ಐಐಟಿ-ದೆಹಲಿಯ ಕಾನೂನು ಮತ್ತು ಸಾರ್ವಜನಿಕ ನೀತಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನವನ್ ಥಾಯಿಲ್ ಸೇರಿದಂತೆ ಭಾರತದ ಹಲವು ಉದ್ಯಮ, ಕಾನೂನು ತಜ್ಞರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಲಿಬರ್ಟಿ ಕಾನ್ಫರೆನ್ಸ್ ನಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳಿಗೆ ಸಂಬಂಧಿಸಿದಂತೆ ಎದುರಾಗುವ ಸವಾಲುಗಳ ಬಗ್ಗೆ ತಜ್ಞರು ಮಾತನಾಡಲಿದ್ದಾರೆ. ಡಿಜಿಟಲ್ ತಾಣಗಳಲ್ಲಿ ಸ್ವಾತಂತ್ರ್ಯದ ಸಂರಕ್ಷಣೆಗೆ ಇರುವ ಅವಕಾಶಗಳು ಹಾಗೂ ಸವಾಲುಗಳನ್ನು ಅನ್ವೇಷಣೆಗೆ ಈ ಸಮ್ಮೇಳನ ಸಹಕಾರಿಯಾಗಲಿದೆ.
ಸಮ್ಮೇಳನದ ಮೊದಲ ಅಧಿವೇಶನದಲ್ಲಿ ಡಿಜಿಟೈಜಿಂಗ್ ಗವರ್ನೆನ್ಸ್ ಮತ್ತು ಪಬ್ಲಿಕ್ ಸರ್ವಿಸ್ ಡೆಲಿವರಿ ಬಗ್ಗೆ ಚರ್ಚೆ, 2 ನೇ ಅಧಿವೇಶನದಲ್ಲಿ ನಿಯಮಗಳನ್ನು ಪುನರಾವಲೋಕಿಸುವ ಅವಶ್ಯಕತೆ, ಮೂರನೇ ಅಧಿವೇಶನದಲ್ಲಿ ನೋಟು ನಿಷೇಧದ ನಂತರದ ಭಾರತ ಹಾಗೂ ನಿರ್ಲಕ್ಷ್ಯಗೊಂಡಿದ್ದವರನ್ನು ಆರ್ಥಿಕತೆಯೊಂದಿಗೆ ಬೆಸೆಯುವುದಕ್ಕೆ ಅಗತ್ಯವಿರುವ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.
ಮುಂಚೂಣಿಯಲ್ಲಿರುವ ಭಾರತದ ಚಿಂತಕರ ಚಾವಡಿ ಸೆಂಟರ್ ಫಾರ್ ಸಿವಿಲ್ ಸೊಸೈಟಿ (ಸಿಸಿಎಸ್) ಎನ್ಎಲ್ಎಸ್ ನ ಸಹಯೋಗದಲ್ಲಿ ಉನ್ನತ ಮಟ್ಟದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕ ನೀತಿಯ ಮೂಲಕ ಸಾಮಾಜಿಕ ಬದಲಾವಣೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಿಸಿಎಸ್ ಕಾರ್ಯನಿರ್ವಹಿಸುತ್ತಿದ್ದು, ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾದಲ್ಲಿ ಚಿಂತಕರ ಚಾವಡಿಗಳು (ಥಿಂಕ್ ಟ್ಯಾಂಕ್ಸ್) ಹಾಗೂ ಸಿವಿಲ್ ಸೊಸೈಟಿ ಪ್ರೋಗ್ರಾಂ ನಡೆಸಿದ ವಾರ್ಷಿಕ ಅಧ್ಯಯನದಲ್ಲಿ ವಿಶ್ವದ ಥಿಂಕ್ ಟ್ಯಾಂಕ್ ಗಳ ಪೈಕಿ ಸೆಂಟರ್ ಫಾರ್ ಸಿವಿಲ್ ಸೊಸೈಟಿ 50 ರ‍್ಯಾಂಕ್ ಹೊಂದಿದ್ದು, ಭಾರತದ ಮುಂಚೂಣಿ ಚಿಂತಕರ ಚಾವಡಿಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos