ಜಲಚರಗಳ ಜೀವ ವೈವಿದ್ಯಗಳನ್ನು ನೋಡಲು ಸಿದ್ದರಾಗಿ, ಆರು ವರ್ಷದ ಬಳಿಕ ಮತ್ತೆ ಬಂದಿದೆ 'ಮತ್ಸ್ಯ ಮೇಳ'
ಬೆಂಗಳೂರು: ಮೀನುಗಾರಿಕೆ ಇಲಾಖೆ ನಡೆಸುವ ಜನಪ್ರಿಯ 'ಮತ್ಸ್ಯ ಮೇಳ', ಆರು ವರ್ಷಗಳ ನಂತರ ಮತ್ತೆ ಬಂದಿದೆ. ಬೆಂಗಳೂರಿನ ಜನರಿಗೆ ಅಲಂಕಾರಿಕ ಮತ್ತು ಇತರ ಮೀನುಗಳ ಪರಿಚಯಿಸುವ ಗುರಿಯನ್ನು ಹೊಂದಿರುವ ನಾಲ್ಕು ದಿನಗಳ ಮೇಳದಲ್ಲಿ ನಗರದಲ್ಲಿ ತೀರಾ ಅಪರೂಪವಾದ ಮೀನು ತಳಿಗಳ ಪ್ರದರ್ಶನವಿರಲಿದೆ. ಮತ್ಸ್ಯ ಮೇಳವು ನಗರದ ಕಂಠೀರವ ಸ್ಟೇಡಿಯಂ ನಲ್ಲಿ ಡಿ.8ರಿಂದ 11ರವರೆಗೆ ನಡೆಯಲಿದೆ.
ಅರೋವಾನಾ, ಅಲಿಗೇಟರ್ ಮೀನು ಮತ್ತು ಕರ್ನಾಟಿಕ್ ಕಾರ್ಪ್ ನಂತಹ ಕೆಲವು ರೀತಿಯ ಮೀನುಗಳು ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿ ಸೇವಿಸಲ್ಪಡುವ 'ಗೆಂಡೆ ಮೀನು' ಅನ್ನು ಪ್ರದರ್ಶಿಸಲಾಗುತ್ತದೆ. "ತಿಲಾಪಿಯಾ, ಪೊಮ್ಫ್ರೆಟ್ ಮತ್ತು ಇನ್ನಿತರ ಮೀನುಗಳು ಮನೆಯಲ್ಲಿನ ಬಳಕೆಗಾಗಿ ಟೆರೇಸ್ ನಲ್ಲಿ ಬೆಳೆಯುತ್ತವೆ. ಟೆರೇಸ್ ನಲ್ಲಿ ಖಾಲಿ ಸ್ಥಳವಿದ್ದಲ್ಲಿ ಇವುಗಳನ್ನು ವಾಣಿಜ್ಯೋದ್ದೇಶದಿಂದ ಬೆಳೆಸಬಹುದು." ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ನ ಮೀನುಗಾರಿಕೆ ಇಲಾಖೆಯ ಪ್ರೊಫೆಸರ್ ಬಿ.ವಿ.ಕೃಷ್ಣಮೂರ್ತಿ ವಿವರಿಸಿದರು.
ನೀರಿನ ತೊಟ್ಟಿಗಳಲ್ಲಿ ಸಸ್ಯಗಳೊಂದಿಗೆ ಮೀನುಗಲನ್ನು ಬೆಳೆಸುವ ವಿಜ್ಞಾನವನ್ನು ಸಹ ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. "ಅದೇ ನೀರನ್ನು ತರಕಾರಿಗಳು ಮತ್ತು ಸಣ್ಣ ಮೀನುಗಳನ್ನು ಬೆಳೆಯಲು ಬಳಸಬಹುದು. ಪಂಗಾಸಿಯಸ್ (ನೀರಿನ ಶಾರ್ಕ್) ಅನ್ನು ಮನೆಯೊಳಗೆ ಬೆಳೆಸಬಹುದು. ಇವುಗಳನ್ನು ಬೆಳೆಸಲು ಕೊಕೊಪ್ಯಾಟ್ನಂತಹ ಪದಾರ್ಥಗಳನ್ನು ಬಳಸಬಹುದು. ಒಮ್ಮೆ ಬೆಳೆದ, ಈ ಅಲಂಕಾರಿಕ ಮೀನುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು, " ಅವರು ಹೇಳಿದರು.
ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುವ ಎರಡು ಜನಪ್ರಿಯ ಮೀನಿನ ಪ್ರಬೇಧಗಳಿದೆ. ಅವುಗಳಲ್ಲಿ ಒಂದು ಅಲಿಗೇಟರ್ ಫಿಶ್ ಈ ಮೀನುಗಳಿಗೆ 2 ಲಕ್ಷ ರೂ. ಬೆಲೆ ಇದೆ. ಮತ್ತು ಅರೋವಾನಾಕ್ಕೆ ಸುಮಾರು 1.5 ಲಕ್ಷ ರೂ. ಬೆಲೆಯಿರುತ್ತದೆ. "ನಾವು ಅವುಗಳನ್ನು ವಾಸ್ತು ಮೀನುಗಳೆಂದು ಕರೆಯದಿದ್ದರೂ, ಅದೃಷ್ಟವನ್ನು ಪರಿಗಣಿಸಿ ಅನೇಕ ಜನರು ತಮ್ಮ ಮನೆಗಳಲ್ಲಿ ಇವುಗಳನ್ನು ಇರಿಸಿಕೊಳ್ಳುತ್ತಾರೆ. ಇದು ಇಂದಿನ ಜನರಲ್ಲಿ ಬೆಳೆಯುತ್ತಿರುವ ಟ್ರೆಂಡ್" ಅಧಿಕಾರಿಗಳೊಬ್ಬರು ಹೇಳಿದರು. "ಈ ವರ್ಷ, ನಾವು 6 ಲಕ್ಷಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸುತ್ತಿದ್ದೇವೆ. 2011 ರಲ್ಲಿ ಸುಮಾರು 5 ಲಕ್ಷ ಜನರು ಮೇಳದಲ್ಲಿ ಪಾಲ್ಗೊಂಡಿದ್ದರು." ಮೀನುಗಾರಿಕೆ ವಿಭಾಗದ ನಿರ್ದೇಶಕ ವೀರಪ್ಪ ಗೌಡ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos