ರಾಜ್ಯ

ಹಿಂದೂ ದಂಪತಿಗಳು ಕನಿಷ್ಟ 4 ಮಕ್ಕಳನ್ನು ಹೊಂದಿರಬೇಕು: ಗೋವಿಂದದೇವ್ ಗಿರಿಜಿ ಮಹಾರಾಜ್

Manjula VN
ಉಡುಪಿ: ಪ್ರತೀಯೊಬ್ಬ ಹಿಂದೂ ದಂಪತಿಗಳು ಕನಿಷ್ಟ ನಾಲ್ಕು ಮಕ್ಕಳನ್ನು ಹೊಂದಿರಬೇಕೆಂದು ಹರಿದ್ವಾರದ ಭಾರತ್ ಮಾತಾ ಮಂದಿರದ ಗೋವಿಂದದೇವ್ ಗಿರಿಜಿ ಮಹಾರಾಜ್ ಸ್ವಾಮೀಜಿಯವರು ಶನಿವಾರ ಹೇಳಿದ್ದಾರೆ. 
ಉಡುಪಿಯಲ್ಲಿ ನಡೆಯುತ್ತಿರುವ ಹಿಂದೂ ಸಂಸದ್'ನಲ್ಲಿ ಮಾತನಾಡಿರುವ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವವರೆಗೂ ಪ್ರತೀಯೊಬ್ಬ ಹಿಂದೂ ದಂಪತಿಗಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿಬೇಕು ಎಂದು ಹೇಳಿದ್ದಾರೆ. 
ಹಿಂದುಗಳ ಜನಸಂಖ್ಯೆ ಎಲ್ಲೆಲ್ಲಿ ಕಡಿಮೆಯಿದೆಯೋ ಆ ಪ್ರದೇಶವನ್ನು ಭಾರತದ ಕಳೆದುಕೊಳ್ಳುತ್ತಿದೆ. ಸರ್ಕಾರ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ, ದೇಶದಲ್ಲಿ ಜನಾಂಗೀಯ ಅಸಮತೋಲನ ಹೆಚ್ಚಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವವರೆಗೂ 2 ಮಕ್ಕಳ ಬದಲಿಗೆ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹೊಂದಬೇಕು. ಆಗ ಮಾತ್ರ ಹಿಂದೂಗಳ ಜನಸಂಖ್ಯೆ ಸಮತೋಲನಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. 
SCROLL FOR NEXT