ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓದಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ 
ರಾಜ್ಯ

ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓಡಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ

ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ. ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು 15 ನಿಮಿಷದಿಂದ 10 ನಿಮಿಷಕ್ಕೆ ಕಡಿತಗೊಳಿಸಿದ್ದು ನಿಗಮವು ಇದೇ ವೇಳಾಪಟ್ಟಿಯನ್ನು ಮುಂದುವರಿಸಲು ತೀರ್ಮಾನಿಸಿದೆ..
ಬೆಳಗ್ಗೆ 8.45 ರಿಂದ 10.30 ರವರೆಗೆ, ನವೆಂಬರ್ 10 ಮತ್ತು ನವೆಂಬರ್ 26 ರಂದು 10 ನಿಮಿಷಗಳ ಅಂತರದಲ್ಲಿ ರೈಲುಗಳ ನಿರ್ವಹಣೆ ಮಾಡಲಾಗಿತ್ತು. ಭಾನುವಾರ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಈಕ್ರಮ ಕೈಗೊಳ್ಳಲಾಗಿದೆ ಎಂದು  ಬಿಎಂಆರ್ ಸಿ ಎಲ್ ನ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್. ಶಂಕರ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. "ಭಾನುವಾರ ರಸ್ತೆಗಳು ಖಾಲಿಯಾಗಿರುತ್ತದೆ. ಖಾಸಗಿ ವಾಹನಗಳ ಸಂಖ್ಯೆ ಕಡಿಮೆ ಇರುವ ಕಾರಣ ರೈಲುಗಳು ಹದಿನೈದು ನಿಷಕ್ಕೊಂದರಂತೆ ಓಡುವುದು ಜನರಿಗೆ ಅನಾಣುಕೂಲವಾಗಿ ಕಾಣಿಸಿದೆ. ಇದರಲ್ಲಿಯೂ ಯಾರಾದರೂ ಕೆಂಪೇಗೌಡ ನಿಲ್ದಾಣದಲ್ಲಿ ಇಳಿದು ಬೇರೆ ರೈಲಿಗೆ ಬದಲಾಯಿಸಬೇಕಾದರೆ ಅವರು ಅರ್ಧ ಗಂಟೆ ಕಾಯಬೇಕಾಗಬಹುದು. ಇದು ಪ್ರಯಾಣಿಕರಿಗೆ ತೀವ್ರ ಸಮಸ್ಯೆಯನ್ನು ತರಲಿದೆ." ಂದು ೀಅವರು ಹೇಳಿದರು.
ಎರಡನೆ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದ ರೈಲು ಸಂಚಾರವು ಜೂನ್ 25 ರಿಂದ ಪ್ರಾರಂಭವಾಯಿತು. ತಿಂಗಳಿನಿಂದ ತಿಂಗಳಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರುತ್ತಲಿದ್ದ ಅಂಶ ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅದರಲ್ಲಿ ಸಹ ನವೆಂಬರ್ ವೇಳೆಗೆ ಅದೊಂದು ಸ್ಥಿರ ಸಂಖ್ಯೆಯನ್ನು ತಲುಪಿದೆ, ಮೆಟ್ರೋ ನಿಗಮದ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಹೇಳುವಂತೆ ಕಳೆದ ಅಕ್ಟೋಬರ್ ನಲ್ಲಿದ್ದಷ್ಟೇ ಸಂಖ್ಯೆಯ ಪ್ರಯಾಣಿಕರು ನವೆಂಬರ್ ನಲ್ಲಿಯೂ ಮುಂದುವರಿದಿದ್ದಾರೆ ಹೊರತು ಇದರಲ್ಲಿ ಹೆಚ್ಚಳವಾಗಿಲ್ಲ "ಕಳೆದ ತಿಂಗಳ ಉತ್ತರಾರ್ಧದಲ್ಲಿ ಹಾಗೆಯೇ ಸಾಮಾನ್ಯವಾಗಿ ಅಕ್ಟೋಬರ್ ನಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚು ಇರುತ್ತದೆ. ಕಳೆದ ತಿಂಗಳು ನಾವು 4 ಲಕ್ಷ ಪ್ರಯಾಣಿಕರನ್ನು ಕಂಡಿದ್ದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಒಟ್ಟು ನಾಲ್ಕು ಬಾರಿ 4 ಲಕ್ಷ ದ ಗಡಿ  ದಾಟಿತ್ತು. ಆದರೆ ನವೆಂಬರ್ ನಲ್ಲಿ ಅಷ್ಟೊಂದು ಜನದಟ್ಟಣೆ ಇರದಿದ್ದರೂ 3.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ." ಖರೋಲಾ ಹೇಳಿದರು.
ನವೆಂಬರ್ ನಲ್ಲಿ  ಇದುವರೆಗೆ ಒಂದೇ ದಿನ 3.8 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿರುವುದು ಉತ್ತಮ ದಾಖಲೆಯಾಗಿದೆ. ಇದೇ ಅಕ್ಟೋಬರ್ ನಲ್ಲಿ 4.12 ಮಂದಿ ಪ್ರಯಾಣ ಬೆಳೆಸಿದ್ದರು. ಕಳೆದ ತಿಂಗಳು ಮೆಟ್ರೋ ಪ್ರಯಾಣ ದರಗಳಿಂದ ಬಂದ ಆದಾಯ `90 ಲಕ್ಷವಾಗಿದ್ದು ಈ ತಿಂಗಳು ಸಹ ಅಷ್ಟೇ ಆದಾಯ ನಿರೀಕ್ಷಿಸಲಾಗಿದೆ ಎಂದು ಖರೋಲಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT