ಓಲಾ, ಉಬರ್'ಗೆ ಸೆಡ್ಡು: ನಗರದ ರಸ್ತೆಗಿಳಿದ 'ನಮ್ಮ ಟೈಗರ್' 
ರಾಜ್ಯ

'ನಮ್ಮ ಟೈಗರ್'ಗೆ ದೇವೇಗೌಡ ಚಾಲನೆ: 5 ಸಾವಿರ ಕ್ಯಾಬ್ ಗಳ ಸೇವೆ ಆರಂಭ

ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ...

ಬೆಂಗಳೂರು: ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು 'ನಮ್ಮ ಟೈಗರ್'ಗೆ ಹಸಿರು ನಿಶಾನೆ ತೋರಿದರು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೂತನ ಸಂಸ್ಥೆಯನ್ನು ಆರಂಭಿಸಲಾಗಿದೆ. 
ಹುಲಿ ಟೆಕ್ನಾಲಜಿಸ್ ಕಂಪನಿ ಹೆಸರಿನಲ್ಲಿ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಓಲಾ ಹಾಗೂ ಉಬರ್ ಕಂಪನಿಯ ಕಿರುಕುಳದಿಂದ ಬೇಸತ್ತಿದ್ದ ಚಾಲಕರು ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಆದರೆ, ಅದರಿಂದ ಪ್ರಯೋಜನವಾಗದಿದ್ದಾಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಿದ್ದರು. ಈ ವೇಳೆ ಚಾಲಕರು ಹಾಗೂ ಮಾಲೀಕರು ಸೇರಿ ಹೊಸ ಕ್ಯಾಬ್ ಸೇವೆ ಆರಂಭಿಸುವಂತೆ ಸಲಹೆ ನೀಡಿದ್ದರು. 
ಇದರಂತೆ ಕಳೆದ 6 ತಿಂಗಳಿಂದ ಸಿದ್ಧತಾ ಕಾರ್ಯ ಆರಂಭಿಸಿದ್ದ, ಚಾಲಕರು ಹಾಗೂ ಮಾಲೀಕರು ಕೊನೆಗೂ ನಮ್ಮ ಟೈಗರ್'ನ್ನು ನಗರ ರಸ್ತೆಗೆ ಬಿಟ್ಟಿದ್ದಾರೆ. ನಮ್ಮ ಟೈಗರ್ ಕ್ಯಾಬ್ ಸೇವೆಗಾಗಿ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವ ಉದ್ದೇಶದಿಂದ ಸೇವೆಯನ್ನು ಆರಂಭಿಸಲಾಗಿದೆ. 
ಕ್ಯಾಬ್ ಚಾಲಕ ರಾಜು ಎಸ್. ಮಾತನಾಡಿ, ಹಲವು ತಿಂಗಳಿಂದಲೂ ನಮ್ಮ ಟೈಗರ್ ಆರಂಭಗೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಈ ಸೇವೆ ಆರಂಭವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳಿತ್ತು. ಕೊನೆಗೂ ನಮ್ಮ ಟೈಗರ್ ಆರಂಭಗೊಂಡಿದೆ. ಪ್ರಸ್ತುತ ನಮಗೆ ದೊರೆಯುತ್ತಿರುವ ಅನುಕೂಲಕ್ಕಿಂತಲೂ ನಮಮ ಟೈಗರ್ ನಲ್ಲು ಉತ್ತಮ ಲಾಭವಿದೆ. ಶುಲ್ಕವನ್ನು ನಿಗದಿ ಮಾಡಿರುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ. 
ನಮ್ಮ ಟೈಗರ್'ನಲ್ಲಿ ಸದ್ಯಕ್ಕೆ 2 ಬಗೆಯ ದರದ ಕ್ಯಾಬ್ ಗಳನನು ಪರಿಚಯಿಸಲಾಗಿದೆ. ಮಿನಿ ಕ್ಯಾಬ್'ಗೆ ಪ್ರತಿ ಕಿ.ಮೀಗೆ ರೂ.12.50 ಸೆಡಾನ್ ನಲ್ಲಿ ಪ್ರತಿ ಕಿ.ಮೀ. ರೂ. 14.50 ಇದೆ. ಮೊದಲ  4 ಕಿ.ಮೀಗೆ ಕ್ರಮವಾಗಿ 69.79 , ಮುಂದೆ ಎಸ್'ಯುವಿ ಪರಿಚಯಿಸಲಾಗುತ್ತಿದ್ದು, ರೂ.18.50 ಮತ್ತು 4 ಕಿಮೀಗೆ ರೂ.9 ದರ ನಿಗದಿ ಮಾಡಲು ಉದ್ದೇಶಿಸಲಾಗಿದೆ ಎಂದು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT