ಡಾ. ವೀರೇಂದ್ರ ಹೆಗ್ಗಡೆ 
ರಾಜ್ಯ

ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾ ಪ್ರಶಸ್ತಿ

ಆ್ಯಕ್ಸೆಸ್‌ ಇಂಡಿಯಾ ನೀಡುವ ಪ್ರತಿಷ್ಠಿತ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಯ್ಕೆ ಆಗಿದ್ದಾರೆ.

ಧರ್ಮಸ್ಥಳ: ಆ್ಯಕ್ಸೆಸ್‌ ಇಂಡಿಯಾ ನೀಡುವ ಪ್ರತಿಷ್ಠಿತ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಯ್ಕೆ ಆಗಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೂಲಕ ಆರ್ಥಿಕ ಸಬಲೀಕರಣಕ್ಕೆ ಹೆಗ್ಗಡೆ ಅವರು ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ಡಾರೆ. "ದೇಶದ ಮೈಕ್ರೋಫೈನಾನ್ಸ್‌ ವಲಯದ ಅಭಿವೃದ್ಧಿಗೆ ನೀಡಿದ ಕಾಣಿಕೆ, ಸಂಸ್ಥೆಗಳನ್ನು ಬೆಳೆಸಿದ ರೀತಿ, ಶದ ಹಣಕಾಸು ವಲಯದ ಸಮಗ್ರ ಮುನ್ನಡೆಗೆ ನಿಮ್ಮ ಕೊಡುಗೆಯನ್ನು ಪರಿಗಣಿಸಿ ನಿಮ್ಮನ್ನು ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ" ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಆಗಸ್ತೆ ತಿಳಿಸಿದ್ದಾರೆ.
ಈ ಬಾರಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ವೀರೇಂದ್ರ ಹೆಗ್ಗಡೆಯವರಿಗೆ ನೀಡಲಾಗಿದೆ. ಡಿ.11ಮತ್ತು 12ರಂದು ದಿಲ್ಲಿಯ ಅಶೋಕಾ ಹೋಟೆಲ್‌ನಲ್ಲಿ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾದ ಸಮಾವೇಶ ನಡೆಯುತ್ತಿದೆ. ಇದರ ಮೊದಲ ದಿನ ಪ್ರಶಸ್ತಿ ಪ್ರಧಾನ ನೆರವೇರಿಸಲಾಗುತ್ತದೆ.
ಸೂಕ್ಷ್ಮ ಹಣಕಾಸು ವಲಯದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮತ್ತು ಆ ವಲಯದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಿ ಕಳೆದ 9 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಹಿಂದೆ ಇದನ್ನೇ ಮೈಕ್ರೋ ಫೈನಾನ್ಸ್‌ ಪ್ರಶಸ್ತಿ ಎಂದು ಕರೆಯಲಾಗುತ್ತಿದ್ದು ಎಚ್‌ಎಸ್‌ಬಿಸಿ ಸಂಸ್ಥೆ ಈ ಪ್ರಶಸ್ತಿ ವಿತರಣೆಗೆ ಸಹಕಾರ ನೀಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

SCROLL FOR NEXT