ಬೆಂಗಳೂರು: ಆಂಧ್ರ ಪ್ರದೇಶ ನಂತರ ದಕ್ಷಿಣ ಭಾರತದಲ್ಲಿ ಕರ್ನಾಟಕ ಎರಡನೇ ಸುರಕ್ಷಿತ ರಾಜ್ಯ ಮತ್ತು ದೇಶದಲ್ಲಿ ಅತ್ಯಂತ ಕಡಿಮೆ ಅಪರಾಧ ಪ್ರಕರಣಗಳು ನಡೆಯುವ ರಾಜ್ಯ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ(ಎನ್ ಸಿಆರ್ ಬಿ) ಭಾರತದಲ್ಲಿ ಅಪರಾಧ-2016ರ ಅಂಕಿಅಂಶ ತಿಳಿಸಿದೆ.ನೆರೆ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ.
ಹಿಂದಿನ ವರ್ಷಗಳಿಗಿಂತ ಈ ವರ್ಷ ಕರ್ನಾಟಕದಲ್ಲಿ ಶೇಕಡಾ 9.5ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ದಾಖಲಾಗುವ ಅಪರಾಧ ಮತ್ತು ಕೇಸುಗಳಲ್ಲಿ 11ನೇ ಸ್ಥಾನದಲ್ಲಿ ಕರ್ನಾಟಕವಿದೆ. ಇಲ್ಲಿ 2016ರಲ್ಲಿ ಒಟ್ಟು ದಾಖಲಾದ ಕೇಸುಗಳ ಸಂಖ್ಯೆ 1.79 ಲಕ್ಷವಿದ್ದರೆ 2015ರಲ್ಲಿ 1.70 ಲಕ್ಷ ಹಾಗೂ 2016ರಲ್ಲಿ 1.63 ಲಕ್ಷಗಳಿದ್ದವು.
ಕ್ರೂರ ಹಿಂಸಾಚಾರ ಪ್ರಕರಣಗಳಲ್ಲಿ ದೇಶದಲ್ಲಿ ದೆಹಲಿ ಮುಂಚೂಣಿಯಲ್ಲಿದೆ. ಇಲ್ಲಿ ಅಪರಾಧ ಹಿಂಸಾಚಾರಗಳ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ ಶೇಕಡಾ 77.5ರಷ್ಟು, ಅಸ್ಸಾಂನಲ್ಲಿ ಶೇಕಡಾ 74.2ರಷ್ಟು, ಹರ್ಯಾಣದಲ್ಲಿ ಶೇಕಡಾ 52.1ರಷ್ಟಿವೆ. ಕೇರಳ ಹೊರತುಪಡಿಸಿ ಬೇರೆ ಯಾವುದೇ ದಕ್ಷಿಣ ಭಾರತ ರಾಜ್ಯಗಳು ಅಪರಾಧ ಸಂಖ್ಯೆಗಳ ಪಟ್ಟಿಯಲ್ಲಿ ಟಾಪ್ 10ನೇ ಸ್ಥಾನದಲ್ಲಿಲ್ಲ. ಕರ್ನಾಟಕ 14ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics