ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಜಿಗಿಯಲು ಮುಂದಾಗಿದ್ದ ವಿದ್ಯಾರ್ಥಿ 
ರಾಜ್ಯ

ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಜಿಗಿಯಲು ಮುಂದಾಗಿದ್ದ ವಿದ್ಯಾರ್ಥಿ ರಕ್ಷಣೆ: ಬ್ಲೂವೇಲ್ ಶಂಕೆ?

ನಗರದ ವಿಂಡ್ಸರ್‌ ಮ್ಯಾನರ್‌ ಸೇತುವೆಯಿಂದ ಜಿಗಿಯಲು ಮುಂದಾಗಿದ್ದ 28 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ

ಬೆಂಗಳೂರು:  ನಗರದ ವಿಂಡ್ಸರ್‌ ಮ್ಯಾನರ್‌ ಸೇತುವೆಯಿಂದ ಬೀಳಲು ಮುಂದಾಗಿದ್ದ 28 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ.ಬಿಹಾರ ಮೂಲದ ಎಂಬಿಎ ವಿದ್ಯಾರ್ಥಿ ಅಜಯ್‌ ಕುಮಾರ್ (28) ಎಂಬಾತನನ್ನು ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.
ಸುಮಾರು 20 ನಿಮಿಷಗಳು ಕಾಲ ಈ ಹೈ ಡ್ರಾಮಾ ನಡೆಯಿತು, ಮಧ್ಯಾಹ್ನ 3.30 ವೇಳೆಗೆ ಅಜಯ್  ಸೇತುವೆ ಹತ್ತುತ್ತಿದ್ದನ್ನು ದಾರಿ ಹೋಕರು  ಗಮನಿಸಿದ್ದಾರೆ. ಅದೇ ವೇಳಎ ಹೈಗ್ರೌಂಡ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದ ಸೆಕ್ಯೂರಿಟಿ ಪರಿಶೀಲಿಸಿ ವಾಪಸ್ ತೆರಳುತ್ತಿದ್ದರು.
ಸಬ್ ಇನ್ಸ್ ಪೆಕ್ಟರ್, ಸುಭಾಷ್ ಚಂದ್ರ ಮತ್ತು ಲಕ್ಷ್ಮಿಕಾಂತ್ ಸೇತುವೆ ಬಳಿ ಸಮೀಪಿಸಿದಾಗ ಅಲ್ಲಿ ನೆರೆದಿದ್ದವರು ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ವಾಹನಗಳು ಆಗಮಿಸಿದವು.
ಸೇತುವೆ ಮೇಲಿಂದ ಹಾರಲು  ತುದಿಗೆ ಬಂದು ನಿಂತಿದ್ದ ಅಜಯ್  ಮನವೊಲಿಸಿದ ಪೊಲೀಸರು ಆತನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಲಕ್ಷ್ಮಿಕಾಂತ್ ಅಜಯ್ ಜೊತೆ ಮಾತನಾಡುತ್ತಿರುವಾಗಲೇ ಉಳಿದ ಸಿಬ್ಬಂದಿ ಸೇತುವೆ ಮೇಲತ್ತಿ ಆತನನ್ನು ಹಿಡಿದಿದ್ದಾರೆ. ಆತನನ್ನು ರಕ್ಷಿಸಿದ ನಂತರ ಅಜಯ್ ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಜಯ್ ಕೈ ಹಾಗೂ ಎದೆ ಭಾಗದಲ್ಲಿ ಕೊಯ್ದ ಗಾಯದ ಗುರುತುಗಳಿದ್ದು, ಆತ ಬ್ಲೂವೇಲ್‌ ಆಟ ಆಡುತ್ತಿರಬಹುದು ಎಂಬ ಅನುಮಾನವಿದೆ. ಆದರೆ, ಆತನ ಬಳಿ ಸದ್ಯಕ್ಕೆ ಮೊಬೈಲ್‌ ಸಿಕ್ಕಿಲ್ಲ. ಎಂದು ಪೊಲೀಸರು ಹೇಳಿದರು.ಕಾಲೇಜೊಂದರಲ್ಲಿ ಎಂಬಿಎ ಓದುತ್ತಿರುವ ಆತ, ಅಲ್ಲಿಯೇ ಹಾಸ್ಟೆಲೊಂದರಲ್ಲಿ ಉಳಿದುಕೊಂಡಿದ್ದಾನೆ. ಮೂರು ದಿನಗಳ ಹಿಂದೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ ಎಂದು ಆತನ ಪೊಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT