ರಾಜ್ಯ

ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಊಟ, ತಿಂಡಿ, ನಿದ್ದೆಗೂ ನಿರಾಕರಿಸುತ್ತಿರುವ ಯುವಕ

Sumana Upadhyaya
ಬೆಂಗಳೂರು: ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ನಿಮ್ಹಾನ್ಸ್ ನಲ್ಲಿ ನಿದ್ದೆ ಮಾಡಲು ಅಥವಾ ಕುಳಿತುಕೊಳ್ಳಲು ನಿರಾಕರಿಸುತ್ತಿದ್ದಾನೆ.
ಬ್ಲೂ ವೇಲ್ ಸವಾಲಿಗೆ ಪ್ರಾಣ ಕಳೆದುಕೊಂಡ ವ್ಯಕ್ತಿಯ ದೇಹದಲ್ಲಿ ಕಂಡುಬಂದ ಗಾಯದ ಗುರುತುಗಳಂತೆ ಈತನ ದೇಹದಲ್ಲಿ ಕೂಡ ಗಾಯವಾಗಿರುವುದು ಪೊಲೀಸರಿಗೆ ಪತ್ತೆಯಾಗಿದೆ.
ಮೊನ್ನೆ ಭಾನುವಾರ 3.30ರ ಸುಮಾರಿಗೆ 28 ವರ್ಷದ ಅಜಯ್ ಕುಮಾರ್ ಎಂಬ ಯುವಕ ವಿಂಡ್ಸರ್ ಮ್ಯಾನರ್ ಸೇತುವೆ ಹತ್ತುವುದನ್ನು ಜನರು ನೋಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಭದ್ರತೆ ತಪಾಸಣೆ ಮಾಡಲು ಹೋಗುತ್ತಿದ್ದ ಹೈ ಗ್ರೌಂಡ್ ಪೊಲೀಸರು ಅಜಯ್ ನನ್ನು ಕೆಳಗಿಳಿಸಿ ರಕ್ಷಿಸಿದ್ದರು. ಬ್ಲೂ ವೇಲ್ ಗೇಮ್ ನಿಂದ ವ್ಯಕ್ತಿ ಪ್ರಭಾವಿತನಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆಪ್ ಡೌನ್ ಲೋಡ್ ಮಾಡುವಂತೆ ಅಜಯ್ ಹಿಂದಿಯಲ್ಲಿ ಒಂದೇ ಸಮನೆ ಬೊಬ್ಬೆ ಹಾಕುತ್ತಿದ್ದ.
ಅಜಯ್ ಕುಮಾರ್ ನಿಮ್ಹಾನ್ಸ್ ಆಸ್ಪತ್ರೆಯ ತನ್ನ ಕೊಠಡಿಯಲ್ಲಿ ಇಡೀ ದಿನ ನಿಂತಿದ್ದು ಆಹಾರವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾನೆ. ಆಟವಾಡಲು ಐಫೋನ್ ಬೇಕೆಂದು ಹಠ ಹಿಡಿಯುತ್ತಿದ್ದಾನೆ. ಆತನ ಪೋಷಕರು ತಮ್ಮ ಊರಾದ ಬಿಹಾರದಿಂದ ಬೆಂಗಳೂರಿಗೆ ಬರುತ್ತಿರುವಾಗ ಆಸ್ಪತ್ರೆಯ ಕೊಠಡಿಯಿಂದ ಫೋನ್ ಮಾಡಿ ತನಗೆ ಫೋನ್ ತಂದುಕೊಡು ಎಂದು ಕೇಳುತ್ತಾನೆ ಎಂದು ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರು ಹೇಳುತ್ತಾರೆ.
ಅಜಯ್ ನ ಪೋಷಕರು ಬೆಂಗಳೂರಿಗೆ ಆಗಮಿಸುತ್ತಿದ್ದು ಅವರು ಬಂದ ತಕ್ಷಣ ಚಿಕಿತ್ಸೆ ಆರಂಭಿಸಲಾಗುವುದು ಎಂದು ಪೊಲೀಸರು ಹೇಳುತ್ತಾರೆ.
SCROLL FOR NEXT