ಬಿಡದಿ: ರೈಲು ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ಮೃತಪಟ್ಟ ಘಟನೆ ಬಿಡದಿ ವಂಡರ್ ಲಾ ಗೇಟ್ ಸಮೀಪ ನಡೆದಿದೆ.
ಸೆಲ್ಫಿ ಕ್ರೇಜ್ನಿಂದಾಗಿ ಸಂಭವಿಸಿರುವ ದುರ್ಘಟನೆ ಇದಾಗಿದ್ದು ಇಂದು ಬೆಳಗ್ಗೆ 9 ಗಂಟೆಗೆ ಬಿಡದಿ ಬಳಿಯ ವಂಡರ್ ಲಾ ಸಮೀಪ ಮಂಚನಾಯಕನ ಹಳ್ಳಿ ಬಳಿಯ ಹಳಿಗಳ ಮೇಲೆ ನಿಂತು ಮೂವರು ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹೀಗೆ ರೈಲ್ವೆ ಹಳಿಗಳ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ವೇಗವಾಗಿ ಬಂದ ರೈಲು ಆ ಮೂವರೂ ವಿದ್ಯಾರ್ಥಿಗಳ ಮೇಲೆ ಹರಿದು ಅವರ ದೇಹಗಳು ಛಿದ್ರಗೊಂಡಿವೆ.
ಶೋಲಾಪುರ -ಮೈಸುರು ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನಡಿ ಸಿಲುಕಿ ಈ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮೃತದೇಹಗಳ ಗುರುತು ಸಿಗದಷ್ಟು ಛಿದ್ರವಾಗಿದ್ದು ಬಿಡದಿ, ಚೆನ್ನಪಟ್ಟಣ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics