ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಳ ಚರಂಡಿ ಕಾಮಗಾರಿಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಕಟುವಾಗಿ ಟೀಕಿಸಿದೆ. ನಗರದಲ್ಲಿ ಭಾರೀ ಮಳೆ ಸುರಿದಾಗ ಉಂಟಾಗುವ ಪ್ರವಾಹಕ್ಕೆ ಪಾಲಿಕೆಯೇ ಕಾರಣ ಎಂದು ಅದು ಹೇಳಿದೆ. ಚರಂಡಿ ನೀರು ಕೆರೆಗೆ ಹೋಗುವುದನ್ನು ತಡೆಗಟ್ಟುವುದು ಮತ್ತು ನೆರೆ ಪ್ರವಾಹವನ್ನು ತಡೆಯುವುದು ದೊಡ್ಡ ಯೋಜನೆ ಎಂದು ಬಿಬಿಎಂಪಿ ಹೇಳಿದರೂ ಕೂಡ ಐಐಎಸ್ಸಿಯ ಇತ್ತೀಚಿನ ವರದಿ ಬೇರೆಯದೇ ಹೇಳುತ್ತದೆ.
ಬೆಂಗಳೂರಿನಲ್ಲಿ ಪದೇ ಪದೇ ಪ್ರವಾಹವಾಗುತ್ತಿರುವುದು ಇದಕ್ಕೆ ಕಾರಣಗಳು ಮತ್ತು ಪರಿಹಾರ ಕ್ರಮಗಳ ಕುರಿತು ಐಐಎಸ್ಸಿ ವರದಿಯಲ್ಲಿ ಹೇಳುತ್ತದೆ. ಚರಂಡಿಯನ್ನು ಕಿರಿದುಗೊಳಿಸಿ ಕಾಂಕ್ರಿಟೀಕರಣ ಮಾಡುವುದರಿಂದ ನೈಸರ್ಗಿಕ ಚರಂಡಿಗಳ ಜಲ ವಿಜ್ಞಾನದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಅಂತರ್ಜಲ ಜೊತೆಗೆ ಚರಂಡಿ ನೀರು ಮಿಶ್ರಣವಾಗುವುದನ್ನು ತಡೆಗಟ್ಟಲು ಚರಂಡಿಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಇದುವೇ ಪ್ರವಾಹ ಉಂಟಾಗಲು ಬಹುಮುಖ್ಯ ಕಾರಣವಾಗಿದೆ. ಕೆರೆಗಳ ಒತ್ತುವರಿ ಮಾಡಿ ಕಟ್ಟಡಗಳ ಮಿತಿಮೀರಿ ನಿರ್ಮಾಣ ಮತ್ತು ಕೆರೆಗಳ ಸಂಪರ್ಕವನ್ನು ಕಡಿಮೆ ಮಾಡುವುದು ಕೂಡ ಪ್ರವಾಹ ಉಂಟಾಗಲು ಇತರ ಕಾರಣವಾಗಿರುತ್ತದೆ ಎಂದು ಐಐಎಸ್ಸಿ ವರದಿ ಹೇಳುತ್ತದೆ.
ಚರಂಡಿಯ ಮೇಲೆ ಮತ್ತು ಕೆಳಗೆ ಕಾಂಕ್ರೀಟ್ ಉಳಿಸಿಕೊಳ್ಳುವ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಒಟ್ಟು 842 ಕಿಲೋ ಮೀಟರ್ ಉದ್ದದ ಒಳ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ 18 ಕಿಲೋ ಮೀಟರ್ ಕಾಂಕ್ರೀಟೀಕರಣವಾಗಿದ್ದು, 68 ಕಿಲೋ ಮೀಟರ್ ಉದ್ದದ ಕಾಮಗಾರಿ ಬಾಕಿಯಿದೆ. ಡಿಸೆಂಬರ್ ವೇಳೆಗೆ 200 ಕಿಲೋ ಮೀಟರ್ ಉದ್ದದ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸದಲ್ಲಿ ಬಿಬಿಎಂಪಿಯಿದೆ. ಈ ಕೆಲಸ ಮುಗಿದ ಮೇಲೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಭಾರಿ ಮಳೆಯಾದಾಗ ನೀರಿನ ವೇಗವನ್ನು ವರ್ಧಿಸುತ್ತದೆ ಮತ್ತು ಪ್ರವಾಹದ ದುರ್ಬಲತೆಯನ್ನು ಹೆಚ್ಚಿಸುತ್ತದೆ ಎಂದು ಐಐಎಸ್ಸಿಯ ಜೀವ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ಟಿ.ವಿ.ರಾಮಚಂದ್ರ ತಿಳಿಸಿದ್ದಾರೆ.
ಕಾಂಕ್ರೀಟೇಶನ್ ಹೇಗೆ ಒಳ ಚರಂಡಿಯ ಅಗಲವನ್ನು ಕಿರಿದುಗೊಳಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿಯಮವನ್ನು ಉಲ್ಲಂಘಿಸುತ್ತದೆ. ಚರಂಡಿಯ ಅಗಲವನ್ನು ಹೆಚ್ಚಿಸಿ ಬೇಲಿ ಹಾಕುವಂತೆ ನ್ಯಾಯಧಿಕರಣ ಈ ಮುನ್ನ ಬಿಬಿಎಂಪಿಗೆ ಆದೇಶ ನೀಡಿತ್ತು.
1908ರಿಂದ 2017ರ ನಡುವೆ ಬೆಳ್ಳಂದೂರಿನ ಜಕ್ಕಸಂದ್ರದಲ್ಲಿ ಒಳ ಚರಂಡಿಯನ್ನು ಶೇಕಡಾ 50ರಷ್ಟು ಕಿರಿದು ಮಾಡಿ ಕಾಂಕ್ರಿಟೀಕರಣ ಮಾಡಲಾಗಿದೆ. ಬೆಳ್ಳಂದೂರು ಮತ್ತು ಸಿಟಿ ಮಾರುಕಟ್ಟೆ ಸಂಪರ್ಕಿಸುವ ರಾಜಕಾಲುವೆಯನ್ನು 60 ಮೀಟರ್ ನಿಂದ 28.5 ಮೀಟರ್ ಗೆ ಚಿಕ್ಕದು ಮಾಡಲಾಗಿದೆ. ಉದು ಹಸಿರು ನ್ಯಾಯಾಧಿಕರಣದ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಐಐಎಸ್ಸಿ ಹೇಳಿದೆ. ಒಳ ಚರಂಡಿಯ ರಕ್ಷಣೆಗೆ ಸಂಸ್ಥೆಯ ವರದಿಯಲ್ಲಿ ಅನೇಕ ಕ್ರಮಗಳನ್ನು ನೀಡಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos