ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ ಪ್ರತಿ 4ರಲ್ಲಿ 1 ಪದವಿ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತದೆ: ಸಮೀಕ್ಷೆ

ರಾಜ್ಯದಲ್ಲಿರುವ ಅನೇಕ ಸರ್ಕಾರಿ ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು....

ಬೆಂಗಳೂರು: ರಾಜ್ಯದಲ್ಲಿರುವ ಅನೇಕ ಸರ್ಕಾರಿ ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲು ಕನಿಷ್ಟ2,013 ಕೋಟಿ ರೂಪಾಯಿ ಬೇಕಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. 
ರಾಜ್ಯದಲ್ಲಿರುವ ಒಟ್ಟು 412 ಸರ್ಕಾರಿ ಕಾಲೇಜುಗಳ ಪೈಕಿ 102 ಪದವಿ ಕಾಲೇಜುಗಳಿಗೆ ಸರಿಯಾಗಿ ಕಟ್ಟಡದ ವ್ಯವಸ್ಥೆಯಿಲ್ಲ. ಕೆಲವು ಕಾಲೇಜುಗಳು ಬಾಡಿಗೆ ಕಟ್ಟಡದಲ್ಲಿದ್ದರೆ ಇನ್ನು ಕೆಲವು ಪಿಯುಸಿ ಕಾಲೇಜು, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳ ಕಟ್ಟಡಗಳಲ್ಲಿ  ತರಗತಿಯನ್ನು ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಕಾಲೇಜಿನ ಬೋಧಕ ಸಿಬ್ಬಂದಿ ಮತ್ತು ಇತರ ಪಾಲುದಾರರು ನೀಡಿರುವ ದೂರಿನ ಆಧಾರದ ಮೇಲೆ ಇಲಾಖೆ ಪದವಿ ಕಾಲೇಜುಗಳ ಪ್ರಮುಖ ಮೂಲಭೂತ ಸೌಕರ್ಯಗಳ ಕುರಿತು ಸಮೀಕ್ಷೆ ನಡೆಸಿ ಕಾಲೇಜಿನ ಅಧಿಕಾರಿಗಳಿಂದ ನೇರವಾಗಿ ಅಂಕಿಅಂಶಗಳನ್ನು ಸಂಗ್ರಹಿಸಿದೆ.
ಎಲ್ಲಾ 412 ಕಾಲೇಜುಗಳ ಸಮೀಕ್ಷೆ ನಡೆಸಲಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಆನ್ ಲೈನ್ ನಲ್ಲಿ ಸಲ್ಲಿಸುವಂತೆ ನಾವು ಕಾಲೇಜು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಸಮೀಕ್ಷೆಯಲ್ಲಿ ಕಾಲೇಜಿನ ಸೌಕರ್ಯಗಳ ಬಗ್ಗೆ 12 ವಿಷಯಗಳನ್ನು ಸೇರಿಸಲಾಗಿತ್ತು. ಕಾಲೇಜು ಕಟ್ಟಡಗಳಿಂದ ಹಿಡಿದು ಪ್ರಯೋಗಾಲಯ ಉಪಕರಣಗಳು ಮತ್ತು ಉಪಯೋಗದ ವಸ್ತುಗಳಿವೆಯೇ ಎಂದು ಸಮೀಕ್ಷೆ ನಡೆಸಲಾಯಿತು ಎಂದು ಕಾಲೇಜು ಶಿಕ್ಷಣಗಳ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
 ಕಾಲೇಜುಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರಿನ ಕೊರತೆ, ಕಂಪೌಂಡ್ ಗೋಡೆಯ ಕೊರತೆಯಂತಹ ಅಗತ್ಯಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಸಮೀಕ್ಷೆಯ ನಂತರ ಅಧಿಕಾರಿಗಳು ಅಂದಾಜು ವೆಚ್ಚವನ್ನು ಲೆಕ್ಕ ಹಾಕಿದ್ದಾರೆ. ಅಂದಾಜು ಪ್ರಕಾರ, 2,013 ಕೋಟಿ ರೂಪಾಯಿಗಳು ಕಾಲೇಜಿನ ಮೂಲ ಸೌಕರ್ಯಗಳ ಖರ್ಚಿಗೆ ಬೇಕಾಗಿದೆ. ನಾವು ಸಮೀಕ್ಷೆ ಮತ್ತು ಅಂದಾಜು ವೆಚ್ಚವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಒಂದು ಬಾರಿ ಅದಕ್ಕೆ ಒಪ್ಪಿಗೆ ಸಿಕ್ಕಿದ ನಂತರ ಹಂತಹಂತವಾಗಿ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಆಡಳಿತಾತ್ಮಕ ಮೂಲ ಸೌಕರ್ಯಗಳ ಕೊರತೆ ಜೊತೆಗೆ ಹೆಚ್ಚುವರಿ ತರಗತಿ, ಡೆಸ್ಕ್, ಪೋಡಿಯಂ ಟೇಬಲ್, ಹಸಿರು ಮತ್ತು ಕಪ್ಪು ಬೋರ್ಡ್, ಕಂಪ್ಯೂಟರ್ ಪ್ರಯೋಗಾಲಯಗಳನ್ನು ನಿರ್ಮಿಸಬೇಕಾಗಿದೆ. ಅಧ್ಯಯನಕ್ಕೆ ಸಂಬಂಧಪಟ್ಟ ಮೂಲ ಸೌಕರ್ಯಗಳಿಗೆ ಇಲಾಖೆ ಸುಮಾರು 19,830 ಕೋಟಿ ರೂಪಾಯಿ ವೆಚ್ಚ ಅಂದಾಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT