ರಾಮದೇವರ ಬೆಟ್ಟ ರಣಹದ್ದು ವನ್ಯಧಾಮ 
ರಾಜ್ಯ

ರಾಮದೇವರಬೆಟ್ಟ ರಣಹದ್ದು ವನ್ಯಜೀವಿ ಧಾಮಕ್ಕೆ ಸೂಕ್ಷ್ಮ ಪರಿಸರ ವಲಯ ಮಾನ್ಯತೆ

ಭಾರತದ ಏಕೈಕ ರಣಹದ್ದು ವನ್ಯಧಾಮ ರಾಮದೇವರ ಬೆಟ್ಟ ರಣಹದ್ದು ವನ್ಯಧಾಮಕ್ಕೆ ಅಂತಿಮವಾಗಿ ಸೂಕ್ಷ್ಮ ಪರಿಸರ ವಲಯ ಮಾನ್ಯತೆ ...

ಬೆಂಗಳೂರು: ಭಾರತದ ಏಕೈಕ ರಣಹದ್ದು ವನ್ಯಧಾಮ ರಾಮದೇವರ ಬೆಟ್ಟ ರಣಹದ್ದು ವನ್ಯಧಾಮಕ್ಕೆ ಅಂತಿಮವಾಗಿ ಸೂಕ್ಷ್ಮ ಪರಿಸರ ವಲಯ ಮಾನ್ಯತೆ ದೊರಕಿದೆ. 
ಬೆಂಗಳೂರಿಗೆ ಅತಿ ಸಮೀಪಿದಲ್ಲಿರುವ ಈ ವನ್ಯಧಾಮದಲ್ಲಿ ಕಳೆದ ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮ ನಡೆಯುತ್ತಿತ್ತು.  1.30 ಕಿಮೀ ರಿಂದ 1.80 ಕಿಮೀ ವರೆಗಿನ 346 ಹೆಕ್ಟೇರ್ . ವನ್ಯಧಾಮ ಭೂಮಿಯನ್ನು  ಕೇಂದ್ರ ಸರ್ಕಾರ ಗುರುತಿಸಿ, ಒಟ್ಟಾರೆ 7.08 ಚದರ ಕಿಮೀ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಿದೆ.
ಈ ಸೂಕ್ಷ್ಮ ಪರಿಸರ ವಲಯಕ್ಕೆ ಸುಮಾರು ಆರು ಗ್ರಾಮಗಳು ಸೇರ್ಪಡೆಗೊಂಡಿವೆ. ಅಳಿವಿಂನಂಚಿನಲ್ಲಿರುವ ಭಾರತೀಯ ಬಿಳಿ ಬಣ್ಣದ ರಣಹದ್ದುಗಳಿರುವ ಕರ್ನಾಟಕದ ಏಕಮಾತ್ರ ಪ್ರದೇಶವಾಗಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಈ ಪ್ರದೇಶದ ರಕ್ಷಣೆ ಮಾಡಲು ಸೂಕ್ಷ್ಮ ಪರಿಸರ ವಲಯದ  ಘೋಷಣೆ ಮಾಡುವ ಅಗತ್ಯವಿತ್ತು. ವನ್ಯಧಾಮದ ಹೊರಗೂ ಕಾರ್ಖಾನೆಗಳನ್ನು ನಿಷೇಸಬೇಕಿದೆ ಎಂದು ಹೇಳಿದ್ದಾರೆ.
ವನ್ಯಧಾಮದೊಳಗಿರುವ ರಾಮದೇವರ ದೇವಾಲಯ ಹಬ್ಬದ ಸಮಯದಲ್ಲಿ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಭಕ್ತರು ಬೆಟ್ಟ ಹತ್ತಲು ಉತ್ಸುಕರಾಗಿರುತ್ತಾರೆ. ಸಮೀಕ್ಷೆಯ ಪ್ರಕಾರ, ಅತಿ ಹೆಚ್ಚಿನ ಪ್ರಮಾಣ ಯುವಕರು ಇಲ್ಲಿಗೆ ಬೈಕ್ ನಲ್ಲಿ  ಆಗಮಿಸುವ ಪ್ರಸಿದ್ಧ ದೇವಾಲಯವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ಬೈಕ್ ಗಳು ಬರುವುದರಿಂದ ಇಲ್ಲಿನ ಪಕ್ಷಿ ಸಂಕುಲದ ಸಂತಾನೋತ್ಪತ್ತಿಗೆ ಅಡಚಣೆಯಾಗುತ್ತಿದೆ.
ರಾಮದೇವರ ಬೆಟ್ಟ ರಣಹದ್ದು ವನ್ಯದಾಮಕ್ಕೆ ಹೊಂದಿಕೊಂಡಿರುವ ಸುಮಾರು ಆರು ಗ್ರಾಮಗಳ 708. 19 ಹೆಕ್ಟೇರ್ ಪ್ರದೇಶ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಲ್ಪಟ್ಟಿದೆ. ಹರಿಸಂದ್ರ, ಮಾದಾಪುರ, ಕೇತೋಹಳ್ಳಿ, ಬಸವನಪುರ, ವಡೇರಹಳ್ಳಿ, ಮತ್ತು ಹಳ್ಳಿಮಲಗಳು ಈ ವ್ಯಾಪ್ತಿಗೆ ಬರುತ್ತವೆ.
ರಣ್ಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಮಾನವನ ಆರೋಗ್ಯ ರಕ್ಷಣೆಗೆ ಹಾಗೂ ಪರಿಸರ ಸ್ವಚ್ಛತೆಯಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT