ರಾಜ್ಯ

ಚಿಟ್ಟಾಣಿ ರಾಮಚಂದ್ರ ಹೆಗಡೆ ಪಂಚಭೂತಗಳಲ್ಲಿ ಲೀನ, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

Shilpa D
ಗುಡ್ಡೇಕೇರಿ: ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗುಡ್ಡಗೇರಿಯಲ್ಲಿ ನೆರವೇರಿತು.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾದ ಯಕ್ಷಗಾನ ಕಲಾವಿದ  85 ವರ್ಷದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತ್ಯಕ್ರಿಯೆ, ತಾಲ್ಲೂಕಿನ ಗುಡ್ಡೆಕೇರಿಯಲ್ಲಿ ಬುಧವಾರ ರಾತ್ರಿ ನೆರವೇರಿತು.
ಚಿಟ್ಟಾಣಿ ಅವರ ತೋಟದ ಮನೆಯ ಸಮೀಪ ನಿರ್ಮಿಸಲು ಉದ್ದೇಶಿಸಿರುವ ರಂಗ ಮಂದಿರದ ಆವಾರದಲ್ಲಿ, ಅವರ ಚಿತೆಗೆ ಹಿರಿಯ ಪುತ್ರ ಸುಬ್ರಹ್ಮಣ್ಯ ಹೆಗಡೆ ಅಗ್ನಿ ಸ್ಪರ್ಶ ಮಾಡಿದರು. 
ಜಿಲ್ಲಾಡಳಿತದಿಂದ ಗೌರವ ವಂದನೆ: ಅಂತ್ಯ ಸಂಸ್ಕಾರಕ್ಕೆ ಸುಮಾರು 4 ತಾಸು ಮೊದಲು, ಉಪವಿಭಾಗಾಧಿಕಾರಿ ಎಂ.ಎನ್‌.ಮಂಜುನಾಥ್‌ ಅವರ ನೇತೃತ್ವದಲ್ಲಿ ಪೊಲೀಸರು ಕುಶಾಲು ತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಅವರ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಯಕ್ಷ ಪ್ರಿಯರಿಂದ ಗೌರವ ಸಲ್ಲಿಕೆಯಾಯಿತು. ಸೆಪ್ಟಂಬರ್ 29 ರಂದು ಚಿಟ್ಟಾಣಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದರು. 
ಚಿತ್ತಾಣಿ ಅವರ  ಜೊತೆ  3 ದಶಕಗಳ ಕಾಲ ಕೆಲಸ ಮಾಡಿದ ಸಂದರ್ಭವನ್ನು ಸುಬ್ರಾಯ ಭಾಗವತ ಕಪ್ಪೆಕೆರೆ ಸ್ಮರಿಸಿದರು.  
SCROLL FOR NEXT