ಸಾಂದರ್ಭಿಕ ಚಿತ್ರ 
ರಾಜ್ಯ

ಇಸಿಸ್ ನತ್ತ ಸೆಳೆಯಲ್ಪಡುತ್ತಿರುವ ಯುವಜನತೆಗೆ ಆಡಿಯೋ ಕ್ಲಿಪ್ ಎಚ್ಚರಿಕೆ ಸಂದೇಶ

ಇಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆ ಗೆ ನೇಮಕದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸಲಾಫಿ ನಾಯಕನ 'ಎಚ್ಚರಿಕೆಯ ಮನವಿ' ಇರುವ ಆಡಿಯೋ ಕ್ಲಿಪ್ ...........

ಮಂಗಳೂರು: ಇಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆ ಗೆ ನೇಮಕದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸಲಾಫಿ ನಾಯಕನ 'ಎಚ್ಚರಿಕೆಯ ಮನವಿ' ಇರುವ ಆಡಿಯೋ ಕ್ಲಿಪ್ ದೊರಕಿದೆ. ಈ ಕ್ಲಿಪ್  ಲಭಿಸಿದ ಬಳಿಕ ದಕ್ಷಿಣ ಕನ್ನಡ ಪೊಲೀಸರು ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. 
ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಜಿಲ್ಲೆಯಲ್ಲಿ ಯುವಕರನ್ನು ಭಯೋತ್ಪಾದಕ ಸಂಸ್ಥೆಗಳಿಗೆ ನೇಮಕ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆಯೆ ಎಂಬ ಬಗ್ಗೆ ಆಡಿಯೋದಲ್ಲಿ ಪ್ರಶ್ನಿಸಲಾಗಿದೆ ಇಸೀಸ್ ಕರಾವಳಿ ಪ್ರದೇಶದ ಉದ್ದಕ್ಕೂ ತನ್ನ ಸಂಪರ್ಕ ಜಾಲವನ್ನು ಬಲಗೊಳಿಸಿ ಕೊಳ್ಳುತ್ತಿದೆ ಎನ್ನಲಾಗಿದೆ.ಇದೀಗ . ಪೊಲೀಸರು ಪರಿಶೀಲಿಸಿದ ಆಡಿಯೊದಲ್ಲಿ, ದಕ್ಷಿಣ ಕರ್ನಾಟಕ ಸಲಾಫಿ ಚಳವಳಿ (ಎಸ್ ಕೆ ಎಸ್ ಎಂ) ಉಪಾಧ್ಯಕ್ಷ ಇಸ್ಮಾಯಿಲ್ ಶಫಿಯುವಜನರಿಗೆ ಇಸೀಸ್ ಗೆ ಸೇರ್ಪಡಿಸುವುದಾಗಿ ಹೇಳುವ ಅಪರಿಚಿತ ವ್ಯಕ್ತಿಗಳ ಕರೆಗಳಿಂದ "ಬಹಳ ಎಚ್ಚರವಾಗಿರಿ" ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿನ ಸಲಾಫಿ ಚಳವಳಿಗೆ ಸಂಬಂಧಿಸಿದ 30 ಮಸೀದಿಗಳಿಗೆ ಒಂದು ಸುತ್ತೋಲೆ ನೀದಲಾಗಿದ್ದು ಮಸೀದಿಗೆ ಬರುವ ಅಪರಿಚಿತರನ್ನು ಯಾವ ಕಾರಣಕ್ಕೂ ಹೆಚ್ಚು ಹುರಿದುಂಬಿಸಬಾರದು ಎಂದು ತಿಳಿಸಲಾಗಿದೆ.
ಸುತ್ತೋಲೆ ಹೊರಡಿಸಿದರೂ ಸಹ, ಬಂಟ್ವಾಳ ತಾಲೂಕಿನ ಮಸೀದಿ ಐದು ಅಪರಿಚಿತರ ಗುಂಪಿಗೆ ತನ್ನಲ್ಲಿ ಉಳಿದುಕೊಳ್ಳಲು ಅವಕಾಶ ನಿಡಿದೆ ಎಂದು ಹೇಳಲಾಗಿದ್ದು ಅಪರಿಚಿತರು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ, ಈ ಸಭೆಗಳಿಂದ ಸ್ಥಳೀಯರನ್ನು ದೂರ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಉಳ್ಳಾಲ, ಮೂಡಬಿದಿರೆ, ಕಾಟಿಪಳ್ಳ ಮತ್ತು ಬಿ.ಸಿ ರೋಡ್ ನಲ್ಲಿರುವ ಮಸೀದಿಗಳಿಗೆ ಅಪರಿಚಿತರು ಆಗಾಗ ಭೇಟಿ ನೀಡುತ್ತಿದ್ದಾರೆ ಅಲ್ಲಿ ಸ್ಥಳೀಯ ಯುವಕರನ್ನು ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಎಚ್. ಸುಧೀರ್ ಕುಮಾರ್ ರೆಡ್ಡಿ ಈ ಬೆಳವಣಿಗೆಯನ್ನು "ಅತ್ಯಂತ ಸೂಕ್ಷ್ಮ" ಎಂದು ಬಣ್ಣಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಅವರು ಎಕ್ಸ್ ಪ್ರೆಸ್ ಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದರು. ಯುವಕರನ್ನು ನೇಮಕ ಮಾಡಲು ಭಯೋತ್ಪಾದಕ ಸಂಘಟನೆಗಳು ಯಾವುದೇ ಪ್ರಯತ್ನಗಳನ್ನು ನಡೆಸಿದೆಯೆ ಎಂದು ಪರಿಶೀಲಿಸಲು ಇಸ್ಮಾಯಿಲ್ ಶಫಿ ಅವರನ್ನು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT