ರಾಜ್ಯ

ಜೈಲು ಶಿಕ್ಷೆಯಲ್ಲಿರುವ ಎಐಎಡಿಎಂಕೆ ನಾಯಕಿ ಶಶಿಕಲಾಗೆ ಐದು ದಿನಗಳ ಪೆರೋಲ್

Shilpa D
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಐದು ದಿನಗಳ ಪೆರೋಲ್ ನೀಡಿದೆ.
ತಮಿಳುನಾಡು ಸರ್ಕಾರದ ಶಿಫಾರಸಿನ ಮೇರೆಗೆ ಅನಾರೋಗ್ಯ ಪೀಡಿತ ಪತಿಯ ಭೇಟಿಗಾಗಿ ಆದು ದಿನಗಳ ಪೆರೋಲ್ ನೀಡಲಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಕೆಲವು ಷರತ್ತುಗಳ ಮೇಲೆ ಶಶಿಕಲಾ ಅವರಿಗೆ ಪೆರೋಲ್ ನೀಡಲಾಗಿದೆ ಎಂದು ಶಶಿಕಲಾ ಪರ ವಕೀಲ ಕೃಷ್ಣಪ್ಪನ್ ತಿಳಿಸಿದ್ದಾರೆ. 
ಶಶಿಕಲಾ ಅವರನ್ನು ಕರೆದೊಯ್ಯಲು ಅವರ  ಆಪ್ತ ಸಂಬಂಧಿ ಟಿಟಿವಿ ದಿನಕರನ್ ಗುರುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಪೆರೋಲ್ ಮೇಲೆ ಬಿಡುಗಡೆಗೊಳ್ಳುವ ಶಶಿಕಲಾ ಅವರನ್ನು ನೋಡಲು ಅವರ ಸುಮಾರು 500 ಬೆಂಬಲಿಗರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುವ ಸಾಧ್ಯತೆಯಿದೆ.
ಶಶಿಕಲಾ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಗೊಳಿಸಲು ತಮಿಳುನಾಡು ಪೊಲೀಸರಿಂದ ಎನ್ ಒಸಿಗಾಗಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಕಾಯುತ್ತಿದ್ದಾರೆ. ತಮಿಳುನಾಡು ಪೊಲೀಸರು ಆಕೆಯ ಭದ್ರತೆ ಬಗ್ಗೆ ದಾಖಲಾತಿ ನೀಡಬೇಕಿದೆ.  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಪತಿಯನ್ನು ನೋಡಲು 15 ದಿನಗಳ ಪೆರೋಲ್ ನೀಡಬೇಕೆಂದು ಎರಡು ದಿನಗಳ ಹಿಂದೆ ಶಶಿಕಲಾ ಅರ್ಜಿ ಸಲ್ಲಿಸಿದ್ದರು.
SCROLL FOR NEXT