ರಾಜ್ಯ

ಎತ್ತಿನಹೊಳೆ ಯೋಜನೆ: ಮೊದಲ ಹಂತ ಪ್ರಾರಂಭಿಸಲು ಎನ್ ಜಿಟಿಯಿಂದ ಅನುಮತಿ

Raghavendra Adiga
ಮಂಗಳೂರು: ರಾಜ್ಯದ ಮಹತ್ವದ ಕುಡಿಯುವ ನೀರಿನ ಯೋಜನೆ, ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಷರತ್ತುಬದ್ದ ಅನುಮತಿ ನೀಡಿದೆ.
ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಕೆಎನ್ ಸೋಮಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಎನ್ ಜಿಟಿ ತಿರಸ್ಕರಿಸಿದೆ. 
3 ಅರ್ಜಿಗಳಲ್ಲಿ ಒಂದು ಅರ್ಜಿ ವಿಚಾರಣೆ ನಡೆಸಿದ ಎನ್ ಜಿಟಿ ಒಂದು ಅರ್ಜಿಯ ಕುರಿತ ತೀರ್ಪನ್ನು ಮಾತ್ರವೇ ಪ್ರಕಟಿಸಿದೆ. ಷರತ್ತುಗಳನ್ನು ಇನ್ನೂ 2 ಅರ್ಜಿ ವಿಚಾರಣೆ ಬಾಕಿ ಇದ್ದು ಅಂತಿಮ ತೀರ್ಪಿನಲ್ಲಿ ಪ್ರಕಟಿಸುವುದಾಗಿ ಎನ್ ಜಿಟಿ ಸ್ಪಷ್ಟಪಡಿಸಿದೆ.
ಎತ್ತಿನ ಹೊಳೆ ಯೋಜನೆ ಏನು ಎತ್ತ?
ನೇತ್ರಾವತಿ ನದಿ ತಿರುವು ಯೋಜನೆಗೆ "ಎತ್ತಿನಹೊಳೆ ಯೋಜನೆ" ಎಂಬ ಹೆಸರಿದೆ. "ಕುಡಿಯುವ ನೀರಿನ ಯೋಜನೆ" ಎಂಬ ಹೆಸರಿನಲ್ಲಿ  ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಪಾರಾಗಿ ಈ ಯೋಜನೆಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಯಿತು. ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಗೆ ಇದರ ಜವಾಬ್ದಾರಿಯನ್ನು ವಹಿಸಲಾಗಿದೆ.
ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ಕೊರತೆ ತೀವ್ರವಾಗಿರುವ ಕಾರಣ ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಜಿಲ್ಲೆಗಳಿಗೆ ಪೂರೈಸುವ ಯೋಜನೆ ಇದಾಗಿತ್ತು.
ಆದರೆ ಈ  ಯೋಜನೆಗೆ ರಾಜ್ಯದ ನಾನಾ ಭಾಗಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು, ಪರಿಸರವಾದಿಗಳು, ಬಿಜೆಪಿ ಸೇರಿದಂತೆ ಸಾಮಾಜಿಕ ಹೋರಾಟಗಾರರು ಯೋಜನೆ ಪ್ರಾರಂಭದ ವಿರುದ್ಧ ಹೋರಾಟ ನಡೆಸಿದ್ದರು. 
SCROLL FOR NEXT