ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ 
ರಾಜ್ಯ

ಸೋಲಾರ್ ಹಗರಣ: ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಖುಲಾಸೆ

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ವಿರುದ್ಧ ಪ್ರಕರಣವನ್ನು ಬೆಂಗಳೂರಿನ ನ್ಯಾಯಾಲಯ ವಜಾ ಗೊಳಿಸಿದೆ.

ಬೆಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ವಿರುದ್ಧ ಪ್ರಕರಣವನ್ನು ಬೆಂಗಳೂರಿನ ನ್ಯಾಯಾಲಯ ವಜಾ ಗೊಳಿಸಿದೆ. ನಗರದ ಉದ್ಯಮಿಯೊಬ್ಬರು ಸೋಲಾರ್ ಯೋಜನೆಗೆ ಹೂಡಿದ್ದ ಹಣವನ್ನು ಹಿಂತಿರುಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಅನ್ನು ನ್ಯಾಯಾಲಯ ವಜಾಗೊಳಿಸಿದೆ.
ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ. ಬಿಮನಗೌಡ ಪಾಟೀಲ್, ಚಾಂಡಿಗೆ ಸಂಬಂಧಪಟ್ಟಂತೆ  ರಿಯಲ್ ಎಸ್ಟೇಟ್ ಉದ್ಯಮಿ ಎಂ. ಕೆ. ಕುರುವಿಲ್ಲಾ ಸಲ್ಲಿಸಿದ ಮೊಕದ್ದಮೆಯನ್ನು ರದ್ದುಪಡಿಸಿದ್ದಾರೆ. ಆದರೂ ಸಹ ಪ್ರಕರಣದ ಇತರೆ , ಇತರ ಆಪಾದಿತರ ವಿರುದ್ಧ ವಿಚಾರಣೆ ಮುಂದುವರಿಯುತ್ತದೆ - ಎಸ್ ಸಿಓಎಸ್ ಎಸ್ ಎ ಶೈಕ್ಷಣಿಕ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್, ಬಿನು ನಾಯರ್, ಆಂಡ್ರ್ಯೂಸ್ ಮತ್ತು ಡೆಲ್ಜಿತ್ ಗೆ ಸಂಬಂಧಿಸಿ ವಿಚಾರಣೆ ಮುಂದುವರಿಯಲಿದೆ.
ಕೊಚ್ಚಿ ಮೂಲದ ಎಸ್ ಸಿಓಎಸ್ ಎಸ್ ಎ  ಕನ್ಸಲ್ಟೆಂಟ್ಸ್ಗೆ ಸೋಲಾರ್ ಅವ್ಯವಹಾರದ ಬಗ್ಗೆ ಈ ಮೊದಲೇ ತಿಳಿದಿದೆ ಎಂದು ಕುರುವಿಲ್ಲಾ ಆರೋಪಿಸಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಡಾ ಮೂಲ್ ಸಂಸ್ಥೆ ಈ ಯೋಜನೆಗೆ ತಂತ್ರಜ್ಞಾನವನ್ನು, ಸಲಕರಣೆಗಳನ್ನು ಒದಗಿಸುತ್ತಿತ್ತು.  ಸೋಲಾರ್ ಯೋಜನೆಗೆ ಸಂಬಂಧಿಸಿ  ಎಸ್.ಒ.ಓ.ಎಸ್.ಎಸ್.ಎ, ಬಿನು, ಆಂಡ್ರ್ಯೂ ಮತ್ತು ಡೆಲ್ಜಿತ್ ಗೆ 1.03 ಕೋಟಿ ರೂ. ಪಾವತಿಸಿದ್ದಾರೆ ಎಂದು ಕುರುವಿಲ್ಲಾ ಆರೋಪಿಸಿದ್ದಾರೆ.
ಚಾಂಡಿ ಲಹೆಗಾರ ಜೋಸೆಫ್ ಆಂಥೋನಿ, ನಾಲ್ವರು ಪ್ರತಿವಾದಿಗಳಿಗೆ ಹಣವನ್ನು ನೀಡಲಾಗಿದೆಯೆಂದು ಆರೋಪಿಸಿ ಚಾಂಡಿ ಅವರ ಮೇಲೆ ವೈಯಕ್ತಿಕವಾಗಿ ಆಪಾದನೆ ಹೊರಿಸಲಾಗುತ್ತಿದೆ ಎಂದು ವಾದಿಸಿದರು. ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ನೋಡಿದಾಗ ಸಂಪೂರ್ಣ ವ್ಯವಹಾರವೇ ಕಾನೂನು ಬಾಹಿರವಾಗಿದೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ:
2016 ಅ.24 ರಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಮಾಜಿ ಮುಖ್ಯಮಂತ್ರಿ ಚಾಂಡಿ ಮತ್ತು ಇತರ ಪ್ರತಿವಾದಿಗಳು ಕರುವಿಲ್ಲಾಗೆ 1,60,85,700 ರೂ. ಹಣ ಜತೆಗೆ 12 ಶೇ. ಬಡ್ಡಿ ಸಹಿತ ನೀದಬೇಕೆಂದು ಆದೇಶಿಸಿತ್ತು, ಆದರೆ ಈ ವರ್ಷ ಏ.5 ರಂದು, ಅದೇ ನ್ಯಾಯಾಲಯ ತನ್ನ ಹಿಂದಿನ ಆದೇಶಕ್ಕೆ ತಡೆ ಒಡ್ಡಿತ್ತು. ಚಾಂಡಿ ವಿಚಾರಣೆಯ ಎದುರಿಸಲು ಅವಕಾಶ ಸಿಗಲಿಲ್ಲ ಎಂದು ಗಮನಿಸಿದ ನ್ಯಾಯಾಧೀಶರು ಆದೇಶವನ್ನು ಹಿಂಪಡೆದಿದ್ದರು.
ಈ ವರ್ಷ ಜ.2 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ಚಾಂಡಿ, ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ಈ ಕುರಿತಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದ ಚಾಂಡಿ, ಹಗರಣಕ್ಕೆ ಸಂಬಂಧಿಸಿದಂತೆ ತನಗೆ ಯಾವುದೇ ಮಾಹಿತಿ ಇಲ್ಲ. ನನಗೂ ಈ ಹಗರಣಕ್ಕೂ ಸಂಬಂಧ ಇಲ್ಲ, ಆದರೂ ನನ್ನ ಮೇಲೆ ಸುಳ್ಳು ಉದ್ದೇಶದಿಂದ ಪ್ರಚಾರವನ್ನು ಪಡೆಯುವ ಸಲುವಾಗಿ . "ಕುರುವಿಲ್ಲಾ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಸೇರಿಸಿದ್ದಾರೆ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT