ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 
ರಾಜ್ಯ

ಬೆಂಗಳೂರು ಕೆಐಎ ದೇಶದ ಮೊದಲ ಆಧಾರ್ ಸಶಕ್ತ ವಿಮಾನ ನಿಲ್ದಾಣ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2018 ರ ಅಂತ್ಯದ ವೇಳೆಗೆ ದೇಶದ ಮೊದಲ ಸಕ್ರಿಯ ಆಧಾರ್ ವಿಮಾನ ನಿಲ್ದಾಣ ಎನಿಸಲಿದೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2018 ರ ಅಂತ್ಯದ ವೇಳೆಗೆ ದೇಶದ ಮೊದಲ ಸಕ್ರಿಯ ಆಧಾರ್ ವಿಮಾನ ನಿಲ್ದಾಣ ಎನಿಸಲಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಲಿಂಕ್ ಮಾಡಿಸುವುದಲ್ಲದೆ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಿದೆ.
ಈ ಉಪಕ್ರಮವು ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಸಹಕಾರಿಯಾಗಲಿದೆ, ಪ್ರಸ್ತುತ ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯು ಸರಾಸರಿ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಬಿಐಎಎಲ್ ಈಗಿರುವ 25 ನಿಮಿಷಗಳ ಅವಧಿಯನ್ನು 10 ನಿಮಿಷಗಳಿಗೆ ಕಡಿತಗೊಳಿಸಲು ಯೋಜಿಸಿದೆ. ಈ ನೂತನ ಮಾದರಿಯಿಂದ, ಪ್ರತಿ ಚೆಕ್ ಪಾಯಿಂಟ್ ನಲ್ಲಿ 5 ಸೆಕೆಂಡುಗಳಲ್ಲಿ ಓರ್ವ ಪ್ರಯಾಣಿಕರನ್ನು ಪರಿಶೀಲಿಸಬಹುದು.
ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಸಂಪರ್ಕಿಸಿಅಲು ಬಿಐಎಎಲ್ ಡಿಸೆಂಬರ್ 2018 ನ್ನು ಗಡುವು ಎಂದು ನಿರ್ಧರಿಸಿದೆ
ಮಾದ್ಯಮ ವರದಿಯ ಪ್ರಕಾರ, ಬಿಐಎಎಲ್  ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಹರಿ ಮಾರಾರ್ "ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ, ಅವರ ತ್ವರಿತ ಆಗಮನ, ನಿರ್ಗಮನಕ್ಕಾಗಿ ಆಧಾರ್ ಸಂಪರ್ಕ ಯೋಜನೆ ಪ್ರಾರಂಭಿಸಲಾಗುತ್ತಿದೆ."
ಡಿಸೆಂಬರ್ 2018 ರ ಹೊತ್ತಿಗೆ ಪ್ರಯಾಣಿಕರು ಎಲ್ಲಾ ಚೆಕ್ ಪಾಯಿಂಟ್ ಗಳಲ್ಲಿ ವಿಳಂಬವಿಲ್ಲದೆ ಮುಕ್ತ ಪ್ರವೇಶವನ್ನು ಹೊಂದಲಿದ್ದಾರೆಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್