ಸೈನೈಡ್ ಮೋಹನ್ 
ರಾಜ್ಯ

ಹಲವು ಸಂದೇಹಗಳಿಗೆ ಪೊಲೀಸರ ಬಳಿ ಉತ್ತರವಿಲ್ಲ: ನ್ಯಾಯಾಲಯದಲ್ಲಿ ಸೈನೈಡ್ ಮೋಹನ್ ವಾದ

ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಣಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಆರೋಪಿ ಸೈನೈಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್ ...

ಬೆಂಗಳೂರು: ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಣಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಆರೋಪಿ ಸೈನೈಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್ ಸೋಮವಾರ ಸ್ವತಃ ತಾನೇ ಹೈಕೋರ್ಟ್ ನಲ್ಲಿ 2 ಗಂಟೆಗಳ ಕಾಲ ವಾದ ಮಂಡಿಸಿದ್ದಾನೆ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆಂಗಳೂರಿಗೆ ಕರೆ ತರಲಾಗಿತ್ತು. 2009ರ ಜೂನ್ 18ರಂದು ಹಾಸನದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಅನಿತಾ ಎಂಬಾಕೆಯ ಶವ ಪತ್ತೆಯಾಗಿತ್ತು. ಅನಿತಾ ಸಾವಿನ ಪ್ರಕರಣದಲ್ಲಿ ಸಂಶಯಕ್ಕೆ ಅವಕಾಶವಿಲ್ಲದ ಹಾಗೆ ಸಾಕ್ಷ್ಯಗಳನ್ನು ಸಾಬೀತು ಪಡಿಸಿಲ್ಲವೆಂದು ಮೋಹನ್ ತನ್ನ ವಾದದಲ್ಲಿ ಮಂಡಿಸಿದ್ದಾನೆ, 
ಅನಿತಾ ಸಾವಿನ ಪ್ರಕರಣದಲ್ಲಿ  ಆಕೆಯ ಸಾವಿಗೆ ಕೀಟನಾಶಕ ಕಾರಣ ಎಂದು ವೈದ್ಯಕೀಯ ವರದಿಯಲ್ಲಿದೆ, ಆದರೆ ಆಕೆಯ ಸಾವಿಗೆ ಸೈನೈಡ್ ಕಾರಣ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ವಾದಿಸಿದ್ದಾನೆ. 
ಪ್ರಕರಣದಲ್ಲಿ ನಾನು ಮುಗ್ಧ ಎಂದು ಹೇಳಿದ್ದರು,  ವಿಚಾರಣಾಧೀನ ನ್ಯಾಯಾಲಯ ನನ್ನ ಮನವಿಯನ್ನು ಆಲಿಸಲಿಲ್ಲ ಎಂದು ಹೇಳಿದ್ದಾನೆ.
ಕನ್ನಡದಲ್ಲಿ ಬರೆದು ಕೊಂಡು ಬಂದಿದ್ದ, ತನ್ನ ವಾದವನ್ನು ನ್ಯಾಯಾಲಯದಲ್ಲಿ ಆತ  ವಿಭಾಗೀಯ ಪೀಠದ ನ್ಯಾಯಮೂರ್ತಿ ರವಿ ಮಳಿಮಠ್ ಮತ್ತು ಜಾನ್ ಮೈಕೆಲ್ ಚುನಾ ಎದುರು ತನ್ನ ವಾದ ಮಂಡಿಸಿದ್ದಾನೆ.
ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಲು ಪೊಲೀಸರು ತಂತ್ರ ನಡೆಸಿದ್ದಾರೆ. ಪೊಲೀಸರು ನನ್ನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅದರಲ್ಲೂ ನಾನು ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸುವಾಗ ಕಾಂಡೋಮ್ ಬಳಸಿದೆ ಎಂಬುದನ್ನು ಸಾಕ್ಷಿಯಾಗಿರಿಸಿಕೊಂಡಿದ್ದಾರೆ, ಜೊತೆಗೆ ಸಂತ್ರಸ್ತೆ ಗರ್ಭಿಣಿಯಾಗಬಾರದೆಂದು ನಾನು ಸೈನೈಡ್ ಲೇಪಿತ ಪಿಲ್ಸ್ ನೀಡಿದ್ದೇನೆ ಎಂದು ಪೊಲೀಸರು ಹೇಳಿದ್ದಾರೆ. ಇದರಲ್ಲಿ ಯಾವುದಾದರೂ ಲಾಜಿಕ್ ಇದೆಯೇ ಎಂದು ಆತ ಪ್ರಶ್ನಿಸಿದ್ದಾನೆ.
ಮೊದಲು ಶಿಕ್ಷಕನಾಗಿದ್ದ ಮೋಹನ್, ತಾನೇ ವಾದ ಮಂಡಿಸಲು 5 ದಿನಗಳ ಕಾಲ ಸಿದ್ಧತೆ ನಡೆಸಿದ್ದ.
ಮೂವರು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯ ಸೈನೈಡ್ ಮೋಹನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT