ರಾಜ್ಯ

ನಿವೃತ್ತ ಐಟಿ ಅಧಿಕಾರಿಯ ಇ-ಫೈಲಿಂಗ್ ಖಾತೆ ಹ್ಯಾಕ್, ದಾಖಲೆಗಳ ಕಳ್ಳತನ

Sumana Upadhyaya
ಬೆಂಗಳೂರು: ಕರ್ನಾಟಕ ಮತ್ತು ಗೋವಾ ಪ್ರದೇಶದ   ಆದಾಯ ತೆರಿಗೆ ಇಲಾಖೆಯ ನಿವೃತ್ತ  ಉನ್ನತ ಅಧಿಕಾರಿಯ  ಇ-ಫೈಲಿಂಗ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್  ಮಾಡಿದ್ದಾರೆ.
ನಿವೃತ್ತ ಅಧಿಕಾರಿಯ ಪತ್ನಿ ಇತ್ತೀಚೆಗೆ ಸೈಬರ್ ಕ್ರೈಮ್  ವಿಭಾಗಕ್ಕೆ ದೂರು ಸಲ್ಲಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ  ಬಂದಿದೆ.
ಅಪರಿಚಿತರು ತಮ್ಮ ಪತಿಯ ಇ-ಫೈಲಿಂಗ್ ಖಾತೆಯನ್ನು  ಹ್ಯಾಕ್ ಮಾಡಿ ತಮ್ಮ, ತಮ್ಮ ಪತಿಯ ಹಾಗೂ ಮಗಳ ಪಾಸ್  ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಆರೋಪಿಗಳು ತಮ್ಮ  ಖಾಸಗಿ ಮತ್ತು ಹಣಕಾಸಿನ ದಾಖಲೆಗಳನ್ನು ಕೂಡ ಕದ್ದಿದ್ದು  ಆದಾಯ ತೆರಿಗೆ ಐಡಿ, ಮೊಬೈಲ್ ಸಂಖ್ಯೆ ಮತ್ತು ಆದಾಯ  ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿದ್ದ ಪ್ಯಾನ್ ಸಂಖ್ಯೆಯನ್ನು  ಕೂಡ  ಬದಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು 12ರಂದು ಐಟಿ ರಿಟರ್ನ್ಸ್ ಸಲ್ಲಿಸಲು ತೆರಿಗೆ  ಇಲಾಖೆಯ ನಿವೃತ್ತ ಅಧಿಕಾರಿ ಹೋಗಿದ್ದಾಗ ತಮ್ಮ ಅಕೌಂಟ್  ಹ್ಯಾಕ್ ಆಗಿರುವ ವಿಷಯ ಗೊತ್ತಾಗಿದೆ. 
ತಮ್ಮ ಐಡಿ ಮತ್ತು ಖಾಸಗಿ ದಾಖಲೆಗಳನ್ನು ಗುಪ್ತ ವಿಧಾನಗಳ  ಮೂಲಕ ಆರೋಪಿಗಳು ಹ್ಯಾಕ್ ಮಾಡಿರಬಹುದು ಎಂದು  ನಿವೃತ್ತ ಅಧಿಕಾರಿ ಸಂಶಯ ವ್ಯಕ್ತಪಡಿಸಿದ್ದಾರೆ. 
ಪ್ರಕರಣ ಕುರಿತು ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು ತನಿಖೆ  ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
SCROLL FOR NEXT