ರಾಜ್ಯ

ಮೈಸೂರಿನಲ್ಲಿ ಭಾರೀ ಮಳೆ: ಕುಪ್ಪಣ್ಣ ಪಾರ್ಕ್ ನಲ್ಲಿ ಮೊಸಳೆ ಪ್ರತ್ಯಕ್ಷ

Raghavendra Adiga
ಮೈಸೂರು: ಮೈಸೂರಿನಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಆಗಿದೆ. ಭಾರೀ ಮಳೆಯಿಂದ ಹಳ ಕೊಳ್ಳದಿಂದ ನೀರು ಹರಿದು ಬಂದಿದ್ದು ನೀರಿನೊಡನೆ ಬಂದ ಮೊಸಳೆಯೊಂದು ಕುಪ್ಪಣ್ಣ ಪಾರ್ಕ್ ನಲ್ಲಿ ಕಾಣಿಸಿಕೊಂಡು ಜನರು ಭಯಾಭೀತಿಗೆ ಕಾರಣವಾಗಿದೆ.
ಪಾರ್ಕ್ ನಲ್ಲಿ ಸ್ವಚ್ಚತಾ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಗೆ ಮೊಸಳೆ ಕಾಣಿಸಿದೆ. ಅವರು ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಹಿಡಿದು ಗೆಂಡೆ ಹೊಸಳ್ಳಿಯಲ್ಲಿ ನದಿಗೆ ಬಿಟ್ಟಿದ್ದಾರೆ.
ಮೃಗಾಲಯದ ಸನಿಹದಲ್ಲಿರುವ ಕಾರಂಜಿ ಕೆರೆ ಯಿಂದ ಮೊಸಳೆ ಬಂದಿರಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಸಂದೇಹ ವ್ಯಕ್ತಪಡಿಸಿದ್ದಾರೆ. ಎಸಿಎಫ್ ಪ್ರಕಾಶ್ ನೇತೃತ್ವದ ತಂಡ 45 ನಿಮಿಷ ಕಾರ್ಯಾಚರಣೆಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
SCROLL FOR NEXT