ರಾಜ್ಯ

ಸೈನೈಡ್ ಮೋಹನ್ ಗೆ ತಪ್ಪಿದ ಗಲ್ಲು; ಸಾಯುವವರೆಗೂ ಜೈಲು

Shilpa D
ಬೆಂಗಳೂರು: ಬಂಟ್ವಾಳ ತಾಲೂಕಿನ ಕೋಳಿಮನೆ ಗ್ರಾಮದ ಅನಿತಾ ಎಂಬ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸೈನೈಡ್ ಮೋಹನ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿರುವ ಕರ್ನಾಟಕ ಹೈಕೋರ್ಟ್ ಆಜೀವ ಸೆರೆವಾಸ ಶಿಕ್ಷೆ ನೀಡಿದೆ.
ರವಿ ಮಳಿಮಠ್ ಮತ್ತು ಜಾನ್ ಮೈಕೆಲ್ ಚುನಾ ಅವರಿದ್ದ ವಿಭಾಗೀಯ ಪೀಠ ಅಧೀನ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಪರಿಷ್ಕರಿಸಿ, ಆತ ಸಾಯುವವರೆಗೂ ಜೈಲಿನಿಂದ ಬಿಡುಗಡೆ ಮಾಡದಂತೆ ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದೆ.
2009 ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಬಂಟ್ವಾಳದ ಅನಿತಾ ಎಂಬಾಕೆಯನ್ನು ಹಾಸನಕ್ಕೆ ಕರೆತಂದು ಮೇಲೆ ಮೋಹನ್ ಅತ್ಯಾಚಾರ ನಡೆಸಿದ್ದ, ನಂತರ ಆಕೆಯನ್ನು ಬಸ್ ನಿಲ್ದಾಣಕ್ಕೆ ಕರೆತಂದು, ಗರ್ಭಿಣಿ ಆಗುವುದನ್ನು ತಪ್ಪಿಸಲು ಆಕೆಗೆ ಮಾತ್ರೆ ನೀಡಿದ್ದ, ಆ ಮಾತ್ರೆ ಸೈನೈಡ್ ಲೇಪಿತವಾಗಿತ್ತು ಅದನ್ನು ಸೇವಿಸಿದ್ದ ಅನಿತಾ ಹಾಸನ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸತ್ತು ಬಿದ್ದಿದ್ದಳು. 
2003 ರಿಂದ 2009 ರವರೆಗೆ ಮೋಹನ್ ಇದೇ ರೀತಿ ಸುಮಾರು 20 ಅಪರಾಧಗಳನ್ನು ಮಾಡಿದ್ದ, ಸರಣಿ ಹಂತಕ ಮೋಹನ್ ಗೆ ನಾಲ್ಕು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು,. ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ.
ಅನಿತಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಮೋಹನ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ಪ್ರಾಸಿಕ್ಯೂಷನ್ ಆತನಿಗೆ ಗಲ್ಲು ಶಿಕ್ಷೆಗೆ ಒತ್ತಾಯಿಸಿತ್ತು. 
SCROLL FOR NEXT