ಬಿಗ್ ಬಜಾರ್, ಬೆಜೈ ಮುಖ್ಯ ರಸ್ತೆ,, ಮಂಗಳೂರು 
ರಾಜ್ಯ

ಮಂಗಳೂರು: ದರೋಡೆ ಸಂಚು ರೂಪಿಸಿದ್ದ 7 ಜನರ ಬಂಧನ

ಮಂಗಳೂರಿನ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಯತ್ನ ನಡೆಸಿದ್ದರೆನ್ನಲಾದ 7 ಯುವಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಮಂಗಳೂರಿನ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಯತ್ನ ನಡೆಸಿದ್ದರೆನ್ನಲಾದ 7 ಯುವಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.  
ಬಿಜೈ-ಕಾಪಿಕಾಡ್ ರಸ್ತೆಯಲ್ಲಿರುವ ಬಿಗ್ ಬಜಾರ್ ಎದುರು 3 ಬೈಕ್ ಗಳಲ್ಲಿ ಆಗಮಿಸಿರುವ ಯುವಕರು ದರೋಡೆಗೆ ಪ್ರಯತ್ನ ನಡೆಸಿದ್ದಾರೆ ಎನ್ನುವ ಕುರಿತು ಮಂಗಳೂರು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು.ತಕ್ಷಣ ದಾಳಿ ನಡೆಸಿದ ಪೋಲೀಸರು 7 ಜನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೊಂಚಾಡಿ ನಿವಾಸಿ ಗೌತಮ್ ದೇವಾಡಿಗ (23), ಕಾವೂರು ನಿವಾಸಿಗಳಾದ ಪ್ರೀತಂ ಪೂಜಾರಿ(23), ವಿಶಾಲ್ ಕುಮಾರ್ (23), ಮೂಡುಶೆಡ್ಡೆ ನಿವಾಸಿಗಳಾದ ವಿನೋದ್ ರಾಜ್ (21) ದಿವಾಕರ (29), ತೊಕ್ಕೊಟ್ಟು ನಿವಾಸಿ ಪ್ರವಣ್ (25), ಯೆಯ್ಯಾಡಿ ನಿವಾಸಿ ಕಾರ್ತಿಕ್ (25) ಎಂದು ಗುರುತಿಸಲಾಗಿದೆ.
ಮೂರು ದ್ವಿಚಕ್ರ ವಾಹನಗಳು, ಮಾರಕಾಸ್ತ್ರಗಳು ಸೇರಿ ಆರು ಮೊಬೈಲ್ ಫೋನ್ ಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರೌಡಿ ಶೀಟರ್ ಆಕಾಶಭವನ ಶರಣ್ ಸೂಚನೆಯಂತೆ ದರೋಡೆ ಸಂಚು ನಡೆಸಿದ್ದರೆಂದು ಪೋಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!