ಸಾಲು ಮರದ ತಿಮ್ಮಕ್ಕ 
ರಾಜ್ಯ

ಆಸ್ಪತ್ರೆಯಿಂದ ಸಾಲು ಮರದ ತಿಮ್ಮಕ್ಕ ಬಿಡುಗಡೆ: ಸಚಿವರ ಕ್ಷಮೆಗೆ ಪಟ್ಟು

ಉಸಿರಾಟ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅವರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಚಿಕಿತ್ಸಾ ವೆಚ್ಚ ಕುರಿತಂತೆ ಸುಳ್ಳು ಹೇಳಿಕೆ ನೀಡಿದ್ದ ಸಚಿವರು ಕ್ಷಮೆಯಾಚಿಸುವಂತೆ...

ಬೆಂಗಳೂರು: ಉಸಿರಾಟ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅವರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಚಿಕಿತ್ಸಾ ವೆಚ್ಚ ಕುರಿತಂತೆ ಸುಳ್ಳು ಹೇಳಿಕೆ ನೀಡಿದ್ದ ಸಚಿವರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದಿಂದಾಗಿ ಸಾಲ ಮರದ ತಿಮ್ಮಕ್ಕ ಅವರು ಜಯನಗರದಲ್ಲಿರುವ ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಯ ವೆಚ್ಚ ರೂ.66.000 ಆಗಿದ್ದು ರಾಜ್ಯಸಭಾ ಸಂಸದರು ವೆಚ್ಚವನ್ನು ಭರಿಸಿದ್ದಾರೆಂದು ತಿಳಿದುಬಂದಿದೆ. 
ತಿಮ್ಮಕ್ಕ ಅವರ ಪುತ್ರ ಉಮೇಶ್ ಅವರು ಮಾತನಾಡಿ, ಅಭಿಮಾನಿಗಳು, ಪರಿಸರ ಪ್ರೇಮಿಗಳು ಹಾಗೂ ಇತರೆ ನಾಗರೀಕರು ತಿಮ್ಮಕ್ಕ ಅವರ ಗೌರವಯುತವಾಗಿ ಜೀವನ ನಡೆಸಬೇಕೆಂಬುದನ್ನು ಬಯಸುತ್ತಾರೆ. ಸರ್ಕಾರ ನೀಡುವ ಹಣದಿಂದಲ್ಲ. ಆಸ್ಪತ್ರೆಯ ಆಡಳಿತಮಂಡಳಿಯವರೇ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಆಕೆ ಗುಣಮುಖರಾಗಲಿ ಎಂದು ಕೋರಿದ್ದರು. 
ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ತಿಮ್ಮಕ್ಕ ಅವರ ಮನಸ್ಸಿಗೆ ಬಹಳ ನೋವಾಗಿದೆ. ತಪ್ಪು ಹೇಳಿಕೆ ಕುರಿತಂತೆ ಸಚಿವರು ಕ್ಷಮೆಯಾಚಿಸುವವರೆಗೂ ತಿಮ್ಮಕ್ಕ ಅವರು ಸರ್ಕಾರ ನೀಡುವ ಯಾವುದೇ ಹಣದ ಸಹಾಯವನ್ನು ಪಡೆಯುವುದಿಲ್ಲ. ಸರ್ಕಾರ ಒಂದು ವೇಳೆ ಆಕೆಗೆ ಹಣವನ್ನು ನೀಡುವುದಾದರೆ, ಚಿಕಿತ್ಸಾ ವೆಚ್ಚವನ್ನು ಭರಿಸಲು ಇಚ್ಛಿಸಿದ್ದೇ ಆದರೆ, ನೇರವಾಗಿ ಹಾಗೂ ಪಾರದರ್ಶಕವಾಗಿ ಮಾಡಲಿ. ತಪ್ಪು ಹೇಳಿಕೆ ನೀಡುವುದು ಬೇಡ ಎಂದಿದ್ದಾರೆ. 
ನಗರ ಸಂರಕ್ಷಕ ವಿಜಯ್ ನಿಶಾಂತ್ ಮಾತನಾಡಿ, ತಿಮ್ಮಕ್ಕಳ ಅವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಬಯಸುತ್ತಿರುವವರು, ಅಭಿಮಾನಿಗಳು ಹಾಗೂ ನಾಗರೀಕರು ಈಗಾಗಲೇ ಧನ ಸಹಾಯವನ್ನು ಮಾಡುತ್ತಿದ್ದಾರೆ. ತಿಮ್ಮಕ್ಕ ಅವರಿಗೆ ಸಹಾಯ ಮಾಡಲು ಬಯಸುವವರು 99724 87991 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!