ಬೆಂಗಳೂರು-ಮೈಸೂರಿನಲ್ಲಿ ಮಳೆ: ತಮಿಳುನಾಡಿಗೆ ಹರಿದ 25 ಅಡಿ ಟಿಎಂಸಿ ನೀರು
ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಮತ್ತು ಮೈಸೂರು ತತ್ತರಿಸಿದವು, ಆದರೆ ಈ ಮಳೆಯೇ ತಮಿಳುನಾಡಿಗೆ ವರವಾಗಿದೆ...
ಮೈಸೂರು: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಮತ್ತು ಮೈಸೂರು ತತ್ತರಿಸಿದವು, ಆದರೆ ಈ ಮಳೆಯೇ ತಮಿಳುನಾಡಿಗೆ ವರವಾಗಿದೆ. 25 ಟಿಎಂಸಿಗೂ ಅಧಿಕ ನೀರು ಕರ್ನಾಟಕದ ನದೀ ತೀರದಿಂದ ತಮಿಳುನಾಡಿಗೆ ಹರಿದು ಹೋಗಿದೆ.
ಅಕ್ಟೋಬರ್ ತಿಂಗಳ ವರೆಗೆ ಕರ್ನಾಟಕ ತಮಿಳುನಾಡಿಗೆ 91.52 ಟಿಎಂಸಿ ನೀರು ಬಿಟ್ಟಿತ್ತು. ಬಿಳಿಗುಂಡಲು ಗೇಜಿಂಗ್ ಸ್ಟೇಷನ್ ನಿಂದ ತಮಿಳು ನಾಡಿಗೆ ಸೆಪ್ಟಂಬರ್ ನಲ್ಲಿ 37 ಟಿಎಂಸಿ ನೀರು ಹರಿದಿರುವುದು ದಾಖಲಾಗಿದೆ. ಬಳಿಗುಂಡಲು ಗೇಜಿಂಗ್ ಸ್ಟೇಷನ್ ಹಿಂದಿರುವ ಎಂಎಂ ಹಿಲ್ಸ್, ಪಲಾರ್ ನದಿ, ಕಾವೇರಿ ವನ್ಯಪ್ರಾಣಿ ಧಾಮದಿಂದ,10 ಟಿಎಂಸಿ ಅಧಿಕ ನೀರು ಮೆಟ್ಟೂರು ಜಲಾಶಯಕ್ಕೆ ಹರಿದ ಹೋಗಿರುವುದು ದಾಖಲಾಗಿದೆ.
ಇನ್ನೂ ಬೆಂಗಳೂರಿ ಅರ್ಕಾವತಿ ನದಿಯ ಹೆಚ್ಚಿನ ನೀರು ಅಂದರೆ ಸುಮಾರು 11 ಟಿಎಂಸಿ ನೀರು ಕೂಡ ಮೆಟ್ಟೂರು ಜಲಾಶಯಕ್ಕೆ ಸೇರಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.
ಕೋಲಾರ ಜಿಲ್ಲೆಯ ಬಂಗಾರ ಪೇಟೆ, ಮಾಲೂರು, ಕೆಜಿಎಫ್, ನಲ್ಲಿರುವ ಹಲವು ಕೆರೆಗಳು ನೀರು ಸಹ ಕರ್ನಾಟಕ-ತಮಿಳುನಾಡು ಸಮೀಪವಿರುವ ಹೊಗೈನೆಕಲ್ ಪಾಲ್ಸ್ ಗೆ ಹರಿದಿದೆ.
ಕೃಷ್ಣರಾಜ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 124.8 ಅಡಿ ಇದೆ. ಆದರೆ ಸದ್ಯ 114 ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ ಮುಂದಿನ ವರ್ಷದ ಜುಲೈವರೆಗೂ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದು,
ಬೇಸಿಗೆ ಬೆಳೆಗಳಿಗೆ ನೀರು ಹರಿಸುವಂತೆ ಕೆಆರ್ ಎಸ್ ಮತ್ತು ಕಬಿನಿ ನದಿ ತೀರದ ರೈತರು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.