ಪರಿಶೀಲನೆ ನಡೆಸುತ್ತಿರುವ ಬೆಂಗಳೂರು ಸಂಚಾರಿ ಪೊಲೀಸರು
ಬೆಂಗಳೂರು: ನಗರ ಸಂಚಾರಿ ಪೊಲೀಸರು ಈ ವರ್ಷ ಬೆಂಗಳೂರಿನಲ್ಲಿ ಸುಮಾರು 1 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಸೆಪ್ಟಂಬರ್ ತಿಂಗಳ ಅಂತ್ಯದ ವೇಳೆಗೆ 80,93,719 ಪ್ರಕರಣಗಳು ದಾಖಲಾಗಿವೆ, ಪ್ರತಿ ನಿಮಿಷದಲ್ಲಿ ಸರಾಸರಿ 21 ಕೇಸುಗಳು ದಾಖಲಾಗುತ್ತಿರುತ್ತವೆ. 2015 ಮತ್ತು 2016 ರಲ್ಲಿ ಬೆಂಗಳೂರು ನಗರ ಪೊಲೀಸರು 76,26,671 ಮತ್ತು 91,80,438 ಕೇಸು ದಾಖಲಿಸಿದ್ದರು.
10 ವರ್ಷಗಳಲ್ಲಿ ಬೆಂಗಳೂರು ನಗರ ಪೊಲೀಸರು ಭಾರತೀಯ ಮೋಟಾರು ವಾಹನ ದಂಡ ಸಂಹಿತೆ ಕಾಯ್ದೆ ಆಧಾರದಲ್ಲಿ 9 ಪಟ್ಟು ಹೆಚ್ಚಿನ ದೂರುಗಳು ದಾಖಲಾಗುತ್ತಿವೆ, 2007 ರಲ್ಲಿ ಒಟ್ಟು 14.44ಲಕ್ಷ ದೂರುಗಳು ದಾಖಲಾಗಿದ್ದವು. ಆದರೆ ಈ ವರ್ಷ ಸಂಚಾರಿ ಪೊಲೀಸರು 1.08 ಕೋಟಿ ದೂರುಗಳನ್ನು ದಾಖಲಿಸಿದ್ದಾರೆ, 2017ನೇ ವರ್ಷದಲ್ಲಿ ಸಂಗ್ರಹಿಸಿದ್ದ ದಂಡದ ಹಣವನ್ನು ಸೆಪ್ಟಂಬರ್ ತಿಂಗಳೊಳಗೆ ಸಂಗ್ರಹಿಸಿರುವುದಾಗೀ ತಿಳಿದು ಬಂದಿದೆ.
ಹೆಚ್ಚಿನ ಸಂಖ್ಯೆ ಕೇಸುಗಳು ತಪ್ಪು ಪಾರ್ಕಿಂಗ್ ಗಾಗಿ ದಾಖಲಾಗಿವೆ. ಇನ್ನೂ ಹೆಲ್ಮೆಟ್ ಧರಿಸದೇ ಸಂಚರಿಸುವುದು, ಎರಡನೇ ಕಾರಣವಾಗಿದೆ. ಜೊತೆಗೆ ಹಿಂಬದಿ ಸವಾರ ಕೂಡ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡುವುದು ಮತ್ತೊಂದು ಕಾರಣವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos