ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆ ಎಸ್ ಪಿಸಿಬಿ ) ಅಧ್ಯಕ್ಷ ಲಕ್ಷಣ್ ಅವರ ನಿವಾಸ ಮತ್ತು ಕಛೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆ ಎಸ್ ಪಿಸಿಬಿ ಅಧ್ಯಕ್ಷ ಲಕ್ಷ್ಮಣ್ ಮನೆ, ಕಛೇರಿ ಮೇಲೆ ಇಂದು ಬೆಳೆಗ್ಗೆ ಐಟಿ ದಾಳಿ ನಡೆದಿದೆ.. ಬಸವೇಶ್ವರ ನಗರ ಮತ್ತು ಸದಾಶಿವನಗರದಲ್ಲಿರುವ ಮನೆಗಳು, ಕಛೇರಿ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.