ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿರುವ ಇತಿಹಾಸ ಪ್ರಸಿದ್ದ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎನ್ನಲಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿದೆ.
ಮಠದ ಹಾಲಿ ಪೀಠಾಧಿಪತಿಯಾಗಿರುವ ಶೀವಾಚಾರ್ಯ ಸ್ವಾಮೀಜಿ ಪುತ್ರನಾಗಿರುವ ದಯಾನಂದ ಎಂಬಾತ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ಇಂದು ಟೀವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮಠದ ಒಳಗೇ ಈ ರಾಸಲೀಲೆ ನಡೆದಿದೆ ಎನ್ನಲಾಗಿದೆ.
ವಿರಶೈವ ಪೀಠಕ್ಕೆ ಶಿವಾಚಾರ್ಯ ಶ್ರೀಗಳು 2011ರಲ್ಲಿ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ದಯಾನಂದನ್ನೇ ನೇಮಕಮಾಡಿಕೊಂಡಿದ್ದರು. ಆಗಲೂ ಸಹ ಮಠದ ಆಸ್ತಿಯ ಮೇಲಿನ ಆಸೆಯಿಂದ ಮಗನಿಗೆ ಪಟ್ಟಾಧಿಕಾರ ನೀಡಿದ್ದರೆನ್ನುವ ಆರೋಪ ಕೇಳಿಬಂದಿತ್ತು. ಇದೀಗ ಭಕ್ತರು ಪೀಠಾಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದು ಗುರುನಂಜೇಶ್ವರ ಸ್ವಾಮೀಜಿ ತಕ್ಷಣ ಮಠ ಬಿಟ್ಟು ತೆರಳಬೇಕು ಬೇರೆ ಸಭ್ಯ ಉತ್ತರಾಧಿಕಾರಿಯನ್ನು ನೇಮಿಸಬೇಕು, ಶ್ರೀಶೈಲ ಶಾಖಾ ಪೀಠದ ಶ್ರೀಗಳು ಮಠಕ್ಕೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.