ಸಾಂದರ್ಭಿಕ ಚಿತ್ರ 
ರಾಜ್ಯ

100 ಸಿಸಿಯೊಳಗಿನ ಬೈಕ್ ನಲ್ಲಿ ಹಿಂಬದಿ ಸವಾರಿಗೆ ನಿಷೇಧ: ದಿಢೀರ್ ಕುಸಿತ ಕಂಡ ಮಾರಾಟ

100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿಗೆ ....

ಬೆಂಗಳೂರು: 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ  ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ನಂತರ ಬೆಂಗಳೂರು ನಗರದಲ್ಲಿ 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನದ ಮಾರಾಟ ದಿಢೀರ್ ಕಡಿಮೆಯಾಗಿದೆ. 
100 ಸಿಸಿಗಿಂತ ಕಡಿಮೆ ಎಂಜಿನಿ ಸಾಮರ್ಥ್ಯವಿರುವ ಬೈಕ್ ಗಳನ್ನು ಖರೀದಿಸಿದರೆ ಅದರ ರಿಜಿಸ್ಟ್ರೇಷನ್ ಗೆ ಅನುಮತಿ ಸಿಗಲಿಕ್ಕಿಲ್ಲ ಅಥವಾ ಖರೀದಿಸಿದ ನಂತರ ಅದನ್ನು ರೂಪಾಂತರ ಮಾಡಲು ಖರ್ಚು ವೆಚ್ಚ ಹೆಚ್ಚಾಗಬಹುದು ಎಂಬುದು ಗ್ರಾಹಕರ ಯೋಚನೆಯಾಗಿದೆ.
ಆಟೋಮೊಬೈಲ್ ಕೈಗಾರಿಕೆ ವಿಶ್ಲೇಷಕರ ಪ್ರಕಾರ, 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳ ಮಾರಾಟ ಬೆಂಗಳೂರಿನಲ್ಲಿ ಶೇಕಡಾ 5.3ರಷ್ಟು ಕಡಿಮೆಯಾಗಿದೆ. ರಾಜ್ಯ ಸರ್ಕಾರ ನಿಷೇಧ ಹೇರಿ ನಾಲ್ಕು ವರ್ಷವಾದ ನಂತರವೂ ಈಗಾಗಲೇ ಸಂಗ್ರಹವಿರುವ 100 ಸಿಸಿ ಗಿಂತ ಕಡಿಮೆ ಸಾಮರ್ಥ್ಯವಿರುವ ವಾಹನಗಳನ್ನು ಏನು ಮಾಡಬೇಕೆಂದು ಗೊಂದಲದಲ್ಲಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ, ಸಾರಿಗೆ ಇಲಾಖೆ ಕಳೆದ ಸೋಮವಾರ ಈ ಆದೇಶ ಹೊರಡಿಸಿತ್ತು.
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಟಿವಿಎಸ್ ಸ್ಟೋರ್ಟ್, ಹೀರೊ ಹೆಚ್ ಎಫ್ ಡಿಲಕ್ಸ್, ಹೀರೊ  ಸ್ಲೆಂಡರ್ ಪ್ಲಸ್, ಟಿವಿಎಸ್ ಎಕ್ಸ್ ಎಲ್ 100, ಹೀರೊ ಸ್ಲೆಂಡರ್ ಪ್ರೊ, ಬಜಾಜ್ ಸಿಟಿ 100, ಹೀರೊ ಹೆಚ್ ಎಫ್ ಡಿಲಕ್ಸ್ ಎಕೊ ಮತ್ತು ಹೀರೊ ಪಾಶನ್ ಐ3ಎಸ್ ಗಳಲ್ಲಿ ಹಿಂಬದಿ ಸವಾರಿಗೆ ನಿಷೇಧ ಹೇರಲಾಗಿದೆ. 

ಸರ್ಕಾರ ಈ ನಿಯಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕರ್ನಾಟಕ ಮೋಟಾರ್ ವಾಹನ ನಿಯಮ 1989ಕ್ಕೆ ತಿದ್ದುಪಡಿ ತರಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ