ರಾಜ್ಯ

ಬೆಂಗಳೂರು ಹೊರವಲಯದಲ್ಲಿ ಸಮಗ್ರ ಟೌನ್ ಷಿಪ್ ನಿರ್ಮಾಣಕ್ಕೆ ಮುಂದಾಗಿರುವ ಬಿಡಿಎ

Sumana Upadhyaya
ಬೆಂಗಳೂರು: ನಗರದಿಂದ 30 ಕಿಲೋ ಮೀಟರ್ ದೂರದಲ್ಲಿ ವಿಶಾಲ ಜಾಗದಲ್ಲಿ ಒಂದೇ ಸೂರಿನಡಿ ನೆಲೆ, ಕೆಲಸ ಮತ್ತು ವಿಶ್ರಾಂತಿಯನ್ನು ನೀಡುವ ಟೌನ್ ಷಿಪ್ ನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸಲಿದೆ. 
ಬಿಡಿಎ ಇಂತಹ ಟೌನ್ ಷಿಪ್ ನ್ನು ಇದೇ ಮೊದಲ ಬಾರಿಗೆ ನಿರ್ಮಿಸುತ್ತಿದ್ದು, ಖಾಸಗಿ ಸಂಸ್ಥೆ ಕೂಡ ಕೈಜೋಡಿಸಲಿದೆ. ಬಿದರಹಳ್ಳಿ ಹೋಬಳಿಯ ಕೋಣದಾಸಪುರ ಗ್ರಾಮದಲ್ಲಿ 167 ಎಕರೆ ಜಾಗದಲ್ಲಿ ಟೌನ್ ಷಿಪ್ ನಿರ್ಮಾಣವಾಗಲಿದ್ದು ಬೆಂಗಳೂರು-ತಿರುಪತಿ ಹೆದ್ದಾರಿಯಲ್ಲಿ ಈ ಸ್ಥಳವಿದೆ.
ಈ ಆಸ್ತಿಯ ಬೆಲೆ ಸುಮಾರು 800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ಸಂಕೀರ್ಣಗಳು, ಮನರಂಜನಾ ಕಾಂಪ್ಲೆಕ್ಸ್ ಗಳು ಕೂಡ ಈ ಟೌನ್ ಷಿಪ್ ನಲ್ಲಿ ತಲೆಯೆತ್ತಲಿದೆ. ಈ ಕುರಿತ ಪ್ರಸ್ತಾವನೆಗೆ ಬಿಡಿಎ ಈಗಾಗಲೇ ಅನುಮೋದನೆ ನೀಡಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೃಹತ್ ಟೆಕ್ ಪಾರ್ಕ್, ಶಾಪಿಂಗ್ ಮಾಲ್ ಗಳು, ಮಲ್ಟಿಪ್ಲೆಕ್ಸ್ ಮತ್ತು ಉನ್ನತ ಮಟ್ಟದ ವಸತಿಗೃಹಗಳು ಈ ಟೌನ್ ಷಿಪ್ ನ ಮುಖ್ಯ ಆಕರ್ಷಣೆಯಾಗಿವೆ.
SCROLL FOR NEXT