ಬೆಂಗಳೂರು: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ.ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಲು ತೆರಳಿದಾಗ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು 18 ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿ ಕಸ್ಟೋಡಿಯನ್ ಮೋಹನ್ ಅವರ ಮೇಲೆ ದಾಳಿ ಮಾಡಿದ್ದಾರೆ. ಮೋಹನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
220 ಪಲ್ಸರ್ ಬೈಕ್ ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಈ ದಾಳಿ ನಡೆಸಿದ್ದು ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಲಾದ ಮೋಹನ್, ಸಾಗರ್ ಹಾಗೂ ಪ್ರಸನ್ನ ಎಟಿಎಂ ಗೆ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು.ಅದರಲ್ಲಿ 18.5 ಲಕ್ಷವನ್ನು ದರೋಡೆ ಮಾಡಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಕೆಲವು ತಿಂಗಳ ಹಿಂದೆ ಸೆಕ್ಯೂರಿಟಿ ಏಜೆನ್ಸಿಯ ಸಿಬ್ಬಂದಿಯೊಬ್ಬ ವಾಹನವನ್ನು ಕದ್ದೊಯ್ದು, ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದ. ಆ ನಂತರ ಆತನನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಂಡ ಘಟನೆ ಇದೀಗ ನೆನಪಿಸಿಕೊಳ್ಳಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos