ಎನ್ ಆರ್ ಐ ಸೌರವ್ ಅವರೊಡನೆ ನಟ ಉಪೇಂದ್ರ 
ರಾಜ್ಯ

ಬೆಂಗಳೂರು ಮಳೆ ರಗಳೆಗೆ ಉಪ್ಪಿ ಏನಂದ್ರು ನೊಡಿ...

ಬೆಂಅಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಜಲಾವೃತವಾಗುವುದು ಮಾಮೂಲಿ ಎಂದಾಗಿದೆ.

 ಬೆಂಗಳೂರು: ಬೆಂಅಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಜಲಾವೃತವಾಗುವುದು ಮಾಮೂಲಿ ಎಂದಾಗಿದೆ. ರಸ್ತೆಗಳ ತುಂಬಾ ಹೊಂಡ ಗುಂಡಿಗಳು ಎದ್ದಿವೆ.  ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಹಲವೆಡೆ ಮರಗಳು ನೆಲಕ್ಕೆ ಉರುಳುತ್ತಿವೆ. ಇದರಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಮಳೆ ಬಂದಾಗ, ಸಾಮಾನ್ಯ ದಿನಗಳಲ್ಲೂ ಬೆಂಗಳೂರಿನಲ್ಲಿ ಈ ಸಮಸ್ಯೆ ಸಾಮಾನ್ಯ. 

ಆದರೆ,ಈಗ ಈ ಸಮಸ್ಯೆಗಳಿಗೆಲ್ಲಾ ಪರಿಹಾರವಿರುವುದಾಗಿ ನಟ ಉಪೇಂದ್ರ ತಿಳಿಸಿದ್ದಾರೆ. ಅವರು ಈ ಕುರಿತಂತೆ ಅನಿವಾಸಿ ಬಾರತೀಯರೊದನೆ ಚರ್ಚಿಸಿದ್ದಾರೆ. 
‘ಪ್ರಜಾಕಾರಣ’ ಪಕ್ಷ ಸ್ಥಾಪಿಸುವುದಾಗಿ ಹೇಳಿ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವ ಮೂನ್ಸೂಚನೆ ನೀಡಿದ್ದ ಉಪೇಂದ್ರ ಇದೇ ಮೊದಲ ಬಾರಿಗೆ ಫೇಸ್‌ಬುಕ್‌ ಲೈವ್‌ ಮೂಲಕ ಬೆಂಗಳೂರಿನ ರಸ್ತೆ, ಒಳಚರಂಡಿ, ಮಳೆನೀರಿನಿಂದಾಗುವ ಸಮಸ್ಯೆಗೆ ಪರಿಹಾರವಿದೆ ಎಂದಿದ್ದಾರೆ.
ಬೆಂಗಳೂರು ಮೂಲದ ಸೌರವ್‌ ಅಮೆರಿಕದಿಂದ ನಗರಕ್ಕೆ ಬಂದಿದ್ದು, ಅವರೊಂದಿಗೆ ಅಮೆರಿಕದಲ್ಲಿನ ರಸ್ತೆ ಮತ್ತು ಮಳೆ, ಒಳಚರಂಡಿ ವ್ಯವಸ್ಥೆ ಕುರಿತು ಉಪೇಂದ್ರ ಮಾತುಕತೆ ನಡೆಸಿದ್ದಾರೆ.
ಅಮೆರಿಕದಲ್ಲಿನ ರಸ್ತೆಗಳ ಗುಣಮಟ್ಟ, ಒಳಚರಂಡಿ ವ್ಯವಸ್ಥೆ ಜತೆಗೆ ಇಲ್ಲಿನ ರಸ್ತೆ, ಮಳೆ ನೀರಿನ ನಿರ್ವಹಣೆ, ಒಳಚರಂಡಿ ಕುರಿತು ಸೌರವ್‌ ಉಪೇಂದ್ರ ಗೆ ವಿವರಿಸಿದ್ದಾರೆ. ಈ ಲೈವ್‌ ವಿಡಿಯೊವನ್ನು ಈವರೆಗೆ 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 
ಅಮೆರಿಕದಲ್ಲಿ ನಿರ್ಮಿಸಿರುವ ರಸ್ತೆಗಳು ಗಟ್ಟಿಮುಟ್ಟಾಗಿವೆ. ಅವುಗಳನ್ನು ಮುಂದಿನ 30 ವರ್ಷಗಳ ವರೆಗೆ ದುರಸ್ಥಿಯನ್ನೂ ಮಾಡುವ ಅಗತ್ಯವಿಲ್ಲ ಎನ್ನುವ ಸೌರವ್, ಬೆಂಗಳೂರಿನ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಹೊಸ ಪ್ಲಾನ್ ನೀಡಿದ್ದಾರೆ. ಆ ಪ್ಲಾನ್ ಏನೆಂದು ತಿಳಿಯಲು ಈ ವೀಡಿಯೋ ನೋಡಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು