ರಾಜ್ಯ

ಮಂಗಳೂರು ಚಲೋ: ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ; ತೀವ್ರಗೊಂಡ ಬಿಜೆಪಿ ಪ್ರತಿಭಟನೆ

Srinivas Rao BV
ಬೆಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ, ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಲು ಫ್ರೀಡಂ ಪಾರ್ಕ್ ಗೆ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಹಿರಿಯ ನಾಯಕರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ನೆರೆದಿದ್ದು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲನೆ ನೀಡಲು ಆಗಮಿಸಬೇಕಿದ್ದ ಯಡಿಯೂರಪ್ಪ ನೇರವಾಗಿ ಮಂಗಳೂರಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ. 
ಪೊಲೀಸರ ನಡೆಯನ್ನು ಖಂಡಿಸಿರುವ ಬಿಜೆಪಿ ಕಾರ್ಯಕರ್ತರು, ನಾಯಕರು  ರಸ್ತೆ ಮಧ್ಯದಲ್ಲಿಯೇ ಕುಳಿತಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ರಾಜ್ಯ ಸರ್ಕರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ರ‍್ಯಾಲಿಗೆ ಚಾಲನೆ ದೊರೆತ ಬಳಿಕ ನೆಲಮಂಗಲ ತಲುಪಿದ ನಂತರ ಮತ್ತೊಂದು ಸಮಾವೇಶ ನಡೆಯಲಿದ್ದು, ಸಂಜೆ ವೇಳೆಗೆ ಕುಣಿಗಲ್, ಯಡಿಯೂರು ಮಾರ್ಗವಾಗಿ ಬೈಕ್ ರ‍್ಯಾಲಿ ಹಾಸನ ತಲುಪಲಿದೆ. ನಂತರ ಹಾಸನದಲ್ಲಿ ಉಳಿದುಕೊಳ್ಳಲಿರುವ ಕಾರ್ಯಕರ್ತರು ಸೆ.06 ರಂದು ಸಕಲೇಶಪುರಕ್ಕೆ ತೆರಳಲಿದ್ದು ಅಲ್ಲಿಯೂ ಸಮಾವೇಶ ನಡೆಯಲಿದೆ. 
ಇನ್ನು ರ‍್ಯಾಲಿಯನ್ನು ತಡೆಯಲು ಪೊಲೀಸರು ಸಹ ಸಿದ್ಧತೆ ನಡೆಸಿದ್ದು, ಕೋಲಾರ, ಮುಳಬಾಗಿಲು ಸೇರಿದಂತೆ ಈಗಾಗಲೇ ಹಲವು ಪ್ರದೇಶಗಳಲ್ಲಿ ರ‍್ಯಾಲಿಗೆ ಸಜ್ಜುಗೊಂಡಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೌನ್ ಹಾಲ್ ಬಳಿ 60 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. 
SCROLL FOR NEXT