ಬೆಂಗಳೂರು: ನನ್ನನ್ನು ಬೆಂಬಲಿಸುತ್ತಿದ್ದ ವ್ಯಕ್ತಿಯನ್ನು ನಾನು ಕಳೆದು ಕೊಂಡಿದ್ದೇನೆ, ಆಕೆ ನನಗೆ ತಾಯಿಯಂತಿದ್ದರು. ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಬಗ್ಗೆಗಿನ ಕನ್ಹಯ್ಯ ಕುಮಾರ್ ಮಾತುಗಳಿವು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕೊನೆಯ ಬಾರಿ ಗೌರಿ ಅವರೊಂದಿಗೆ ಮಾತನಾಡಿದ ಕ್ಷಣಗಳನ್ನು ಸ್ಮರಿಸಿದ್ದಾರೆ.
ಆಗಸ್ಟ್ 10 ರಂದು ದುಷ್ಕರ್ಮಿಗಳ ದಾಳಿಗೊಳಗಾಗಿದ್ದೆ. ಅದಾದ ನಂತರ ಗೌರಿ ಲಂಕೇಶ್ ಅರಿಂದ ಕರೆ ಬಂದಿತ್ತು. ಜನೆ ನಿನ್ನನ್ನು
ಟಾರ್ಗೆಟ್ ಮಾಡಿದ್ದಾರೆ, ಹೀಗಾಗಿ ಎಚ್ಚರದಿಂದಿರು ಎಂದು ಸಲಹೆ ನೀಡಿದ್ದರು. ಅವರು ತುಂಬಾ ಪವರ್ ಫುಲ್ ಎಂದು ಹೇಳಿದ ಆಕೆ, ನಾನು ಸೇಫ್ ಆಗಿದ್ದಾನೆಯೇ ಎಂಬ ಬಗ್ಗೆ ವಿಚಾರಿಸಿದರು.
ನನ್ನ ಬಗ್ಗೆ ಯಾವಾಗಲೂ ಅವರು ಗಮನ ಹರಿಸುತ್ತಿದ್ದರು. ಗೌರಿ ಲಂಕೇಶ್ ಅವರು ಕನ್ಹಯ್ಯ ನನ್ನು ತಮ್ಮ ಬ್ಯಾಡ್ ಸನ್ ಎಂದು ಕರೆಯುತ್ತಿದ್ದರು, ನಾನು ನಿಜಯವಾಗಿಯೂ ಕೆಟ್ಟ ಮಗ, ಏಕೆಂದರೇ ನಾನು ಅವರಿಗೆ ಸತತವಾಗಿ ಕರೆ ಮಾಡುತ್ತಿರಲಿಲ್ಲ ಎಂದು ಕನ್ಹಯ್ಯ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಅವರು ನನಗೆ ತುಂಬಾ ಹತ್ತಿರವಾಗಿದ್ದರು. ಅವರು ಜೆಎನ್ ಯು ಆಗಮಿಸಿದಾಗ ಮೊದಲು ನಾನು ಅವರನ್ನು ಭೇಟಿಯಾಗಿದ್ದೆ, ಆನಂತರ ಅವರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೆ, ಆಕೆಯಿಂದ ಪತ್ರ ಬಂದಿತ್ತು, ನಾನು ಜೈಲಿನಿಂದ ಬಿಡುಗಡೆಗೊಂಡ ನಂತರ ಅವರು ನನಗಾಗಿ ಹೊಸ ಬಟ್ಟೆಗಳನ್ನು ತಂದಿದ್ದರು. ಆದರೆ ಪತ್ರದಲ್ಲಿ ಏನು ಬರೆದಿದ್ದರು ಎಂಬುದನ್ನು ಕನ್ಹಯ್ಯ ಬಹಿರಂಗ ಪಡಿಸಲಿಲ್ಲ, ಅದು ತುಂಬಾ ವಯಕ್ತಿಕ ವಿಷಯವಾಗಿತ್ತು, ಹೀಗಾಗಿ ಅದನ್ನು ನಾನು ಯಾರ ಜೊತೆಯೂ ಹಂಚಿಕೊಳ್ಳಲಾರೆ, ಬೆಂಗಳೂರಿನಲ್ಲಿ ನಾನು ಎರಡು ಬಾರಿ ಅವರನ್ನು ಕಳೆದ ಆಗಸ್ಟ್ 5 ಮತ್ತು 6 ರಂದು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ನಾನು ಬೆಂಗಳೂರಿನ ಸಮಾವೇಶಕ್ಕಾಗಿ ಬಂದಿದ್ದಾಗ ನಾನು ಅವರ ಮನೆಯಲ್ಲಿದ್ದೆ, ನನ್ನನ್ನು ಊಟಕ್ಕೆ ಕರೆದೊಯ್ದಿದ್ದ ಅವರು ಹಲವು ಪತ್ರಕರ್ತರು ಹಾಗೂ ಶಿಕ್ಷಣ ತಜ್ಞರಿಗೆ ನನ್ನನ್ನು ಪರಿಚಯಿಸಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯನ್ನು ನಿಂದಿಸಲಾಗಿತ್ತು, ಇದರಿಂದ ಜೀವನಕ್ಕೆ ಯಾವುದೇ ಮೌಲ್ಯವಿಲ್ಲ, ಹಲವು ನಕ್ಸಲರನ್ನು ಗೌರಿ ಲಂಕೇಶ್ ಮುಖ್ಯವಾಹಿನಿಗೆ ಕರೆ ತಂದು ಸಹಜ ಜೀವನ ನಡೆಸುವಂತೆ ಮಾಡಿದರು , ಆದರೆ ಅವರಿಗೆ ಏನು ಸಿಕ್ಕಿತು ಎಂದು ಕನ್ಹಯ್ಯ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics