ಸೈಂಟ್ ಮೆರಿಸ್ ಚರ್ಚ್ ಮೆರವಣಿಗೆಯ ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿವಾಜಿನಗರದಲ್ಲಿ ವಾರ್ಷಿಕ ಸೈಂಟಿ ಮೇರಿಸ್ ಚರ್ಚ್ ಮೆರವಣಿಗೆ ನಡೆಯಲಿರುವುದರಿಂದ ನಗರದ ಪ್ರಮುಖ ಭಾಗಗಳಲ್ಲಿ ವಾಹನಗಳ ಪಾರ್ಕಿಂಗ್ ನ್ನು ಇಂದು ನಿಷೇಧಿಸಲಾಗಿದೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆಯ ಕೆಲ ಭಾಗಗಳು ಮತ್ತು ಇನ್ ಫೆಂಟ್ರಿ ರಸ್ತೆ, ಸಿಬಿಡಿ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್ ನ್ನು ಇಂದು ನಿಷೇಧಿಸಲಾಗಿದೆ.
ಮೀನಾಕ್ಷಿ ಕೊಯ್ಲ್ ರಸ್ತೆ, ಬ್ರಾಡ್ ವೇ ರಸ್ತೆ ಮತ್ತು ಧರ್ಮರಾಜ್ ಕೊಯ್ಲ್ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕಬ್ಬನ್ ರಸ್ತೆಯಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ತೆರಳುವ ಬಿಆರ್ ವಿ ಜಂಕ್ಷನ್ ನಿಂದ ಮತ್ತು ಬಾಳೆಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ವಾಹನ ಸಂಚಾರವನ್ನು ಮಧ್ಯಾಹ್ನ 2 ಗಂಟೆಯಿಂದ ರಾತ್ರಿಯವರೆಗೆ ನಿಷೇಧಿಸಲಾಗಿದೆ.
ಆರ್ಮಿ ಸ್ಕೂಲ್ ಎದುರುಗಡೆ ಕಾಮರಾಜ ರಸ್ತೆ, ಕಬ್ಬನ್ ಪಾರ್ಕ್ ಒಳಗಡೆ ಕಿಂಗ್ಸ್ ರಸ್ತೆಯಲ್ಲಿ ಸಫೀನಾ ಪ್ಲಾಜ್ ಎದುರು, ಜಶ್ಮಾ ಭವನ್ ರಸ್ತೆ, ಗಂಗಾಧರ್ ಚೆಟ್ಟಿ ರಸ್ತೆ, ಡಿಕೆನ್ಸ್ ನ್ ರಸ್ತೆಯ ಅನಾಥಾಶ್ರಮ ಹತ್ತಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚುವರಿ ಬಸ್ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics