ಕೆಂಪೇಗೌಡ ಜಯಂತಿ ಆಚರಣೆ ಪ್ರಯುಕ್ತ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡ ವೇದಿಕೆ
ಬೆಂಗಳೂರು: ಇದೇ ಶನಿವಾರ ಕೆಂಪೇಗೌಡ ಜಯಂತಿ ಆಚರಣೆಯಿರುವುದರಿಂದ ಮೈಸೂರು ರಸ್ತೆಯಿಂದ ಮಲ್ಲತಹಳ್ಳಿಗೆ ಸಂಪರ್ಕಿಸುವ ಜ್ಞಾನಭಾರತಿ ಕ್ಯಾಂಪಸ್ ನ ಒಂದು ಕಡೆಯ ಪ್ರವೇಶವನ್ನು ಬೆಂಗಳೂರು ವಿಶ್ವವಿದ್ಯಾಲಯ ಕೆಲ ದಿನಗಳ ಮಟ್ಟಿಗೆ ಮುಚ್ಚಿದೆ. ಈ ಮಾರ್ಗದ ಮೂಲಕ ನಿತ್ಯ ಹೋಗುತ್ತಿದ್ದ ಪ್ರಯಾಣಿಕರಿಗೆ ಇದರಿಂದ ಅನನುಕೂಲವಾಗಿದೆ. ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕೆಂಪೇಗೌಡ ಅಧ್ಯಯನ ಕೇಂದ್ರ ಇದೇ ಶನಿವಾರ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಲ್ಲಿ ಸುಮಾರು 6,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಜೆಬಿ ಪೊಲೀಸ್ ಠಾಣೆಯ ಹತ್ತಿರ ಜ್ಞಾನ ಭಾರತಿ ಕ್ಯಾಂಪಸ್ ನ ಮಾರ್ಗ ಮಧ್ಯೆ ಕಾರ್ಯಕ್ರಮದ ವೇದಿಕೆ ನಿರ್ಮಿಸಲಿದ್ದಾರೆ. ಇದಕ್ಕಾಗಿ ಈ ಮಾರ್ಗವನ್ನು ಮುಚ್ಚಲಾಗಿದೆ.
ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, ಅಷ್ಟು ದೊಡ್ಡ ವೇದಿಕೆ ನಿರ್ಮಿಸಲು ನಮಗೆ ಕನಿಷ್ಟವೆಂದರೂ 2 ದಿನಗಳು ಬೇಕು. ಹೀಗಾಗಿ ನಾವು ರಸ್ತೆಯ ಪ್ರವೇಶವನ್ನು ಮುಚ್ಚಿದ್ದೇವೆ ಎನ್ನುತ್ತಾರೆ.