ಬೆಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಯುವತಿಯೊಬ್ಬರು ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಾರು ನಿಲ್ಲಿಸಿ ನೃತ್ಯ ಮಾಡಿದ್ದಾರೆ. ಡ್ಯಾನ್ಸ್ ಮಾಡುತ್ತಿದ್ದಾಗ ಆಯಾ ತಪ್ಪಿ ರಸ್ತೆ ಮೇಲೆ ಬೀಳುತ್ತಾರೆ. ಮತೀಸ್ಥಿಮಿತ ಕಳೆದುಕೊಂಡಿದ್ದರಿಂದ ತಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯದೇ ಯುವತಿ ಡ್ಯಾನ್ಸ್ ಮಾಡಿದ್ದು ಅಲ್ಲದೆ ಹಾಗೇ ದಾರಿಯಲ್ಲಿ ಬರುವ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿದ್ದಾರೆ.
ಕುಡಿದ ನಶೆ ಇಳಿಯುವವರೆಗೂ ಬೀದಿಯಲ್ಲೇ ಮಲಗಿದ್ದ ಯುವತಿ ಮುಂಜಾನೆ ಮನೆಗೆ ತೆರಳಿದ್ದಾರೆ. ಯುವತಿಯ ನೃತ್ಯವನ್ನು ಸ್ಥಳೀಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.