ಬೆಂಗಳೂರು: ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣಗಳ ಸಂಗ್ರಹ "ಹಣಕ್ಲಾಸು" ಪುಸ್ತಕ ಹಾಗೂ ಬಿಆರ್ ಪ್ರಸಾದ್ ಅವರ ಶಿಕ್ಷಕರ ಡೈರಿಯಿಂದ ಪುಸ್ತಕ ಸೆ.13 ರಂದು ಬಿಡುಗಡೆಯಾಗಲಿದೆ.
ಸಮೃದ್ಧ ಸಾಹಿತ್ಯ ಪ್ರಕಾಶನ ಹಣಕ್ಲಾಸು ಹಾಗೂ ಶಿಕ್ಷಕರ ಡೈರಿಯಿಂದ ಪುಸ್ತಕಗಳನ್ನು ಪ್ರಕಟಿಸಿದ್ದು, ಸೆ.13 ರ ಸಂಜೆ 6:00 ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು ಇತಿಹಾಸ ತಜ್ಞರಾದ ಸುರೇಶ್ ಮೂನಾ, ವಿಜ್ಞಾನಿಗಳು ಹಾಗೂ ಅಂಕಣಕಾರರು ಆದ ಸುಧೀಂದ್ರ ಹಾಲ್ದೊಡ್ಡೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸಮೃದ್ಧ ಪರಿಚಯ ಸೇವ ಪ್ರಶಸ್ತಿ ಪುರಸ್ಕೃತರಾದ ವಿನೋದ ಪ್ರಕಾಶ್, ವಿಜಯ ನಾಯಕ್, ಶ್ರೀದೇವಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.