ಬೆಂಗಳೂರು: ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವಿನ 15.5 ಕಿಮೀ ನಡುವಿನ ಮೆಟ್ರೋ ಎರಡನೇ ಹಂತದ ವಿವರಗಳು ಸೆ.13 ರಂದು ಬಹಿರಂಗಗೊಂಡಿದೆ.
ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ಟೆಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗಾಗಿ ಹೆಚ್ಚಿನ ನಿರೀಕ್ಷೆ ಇದೆ. ಮೆಟ್ರೋ 2 ನೇ ಹಂತದಲ್ಲಿ ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವೆ ಒಟ್ಟು 13 ನಿಲ್ದಾಣಗಳು ಇರಲಿವೆ.
ಜ್ಯೋತಿ ಪುರ, ಕೃಷ್ಣರಾಜ ಪುರ, ಮಹದೇವಪುರ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ ಇಂಡಸ್ಟ್ರಿಯಲ್ ಏರಿಯಾ, ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಏರಿಯಾ, ಕುಂದನಹಳ್ಳಿ, ವೈದೇಹಿ ಆಸ್ಪತ್ರೆ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ಐಟಿಪಿಎಲ್, ಕಾಡುಗೋಡಿ, ಉಜ್ವಲ ವಿದ್ಯಾಲಯ್ಯ, ವೈಟ್ ಫೀಲ್ಡ್ ನಿಲ್ದಾಣಗಳು ಇರಲಿವೆ, ಕೆಆರ್ ಪುರಂ ಮೆಟ್ರೋ ನಿಲ್ದಾಣ ಇಂಟರ್ ಚೇಂಜ್ ನಿಲ್ದಾಣವಾಗಲಿದ್ದು, ಸಿಲ್ಕ್ ಬೋರ್ಡ್ ಕಡೆಗೂ ಸಂಪರ್ಕ ಕಲ್ಪಿಸುವ ನಿಲ್ದಾಣವಾಗಲಿದೆ.