ರಾಜ್ಯ

ಗೌರಿ ಲಂಕೇಶ್ ಹತ್ಯೆ ಕೇಸ್: ವಿಜಯಪುರ ಜೈಲಿನಲ್ಲಿ ಕೈದಿಗಳ ವಿಚಾರಣೆ

Shilpa D
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡದ ಅಧಿಕಾರಿಗಳು,ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ವಿಚಾರಣೆ ನಡೆಸಿದ್ದಾರೆ.
ವಿಜಯಪುರ ಮತ್ತು ಕಲಬುರಗಿಯಲ್ಲಿರುವ ಆಳಂದ ಉಪ ಕಾರಾಗೃಹಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿತವಾಗಿರುವ ಕೈದಿಗಳ ವಿಚಾರಣೆ ನಡೆಸಿದರು ಎಂದು ಪೊಲೀಸ್ ಮೂಲಗಳಉ ತಿಳಿಸಿವೆ.
ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ತಯಾರಿಕೆ ಬಗ್ಗೆ  ಅಧಿಕಾರಿಗಳು ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ. ರೌಡಿ ಶೀಟರ್ ಹೆಬ್ಬೆಟ್ಟು ಮಂಜ ಮತ್ತು ಸೀನ ಸಹಚರರನ್ನು ವಿಜಯಪುರ ಜೈಲಿನಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ಗೌರಿ ಹತ್ಯೆಗೆ ಕೆಲ ರೌಡಿ ಶೀಟರ್ ಗಳು ಶಸ್ತ್ರ ಪೂರೈಸಿರುವ ಶಂಕೆ ವ್ಯಕ್ತವಾಗಿದೆ, ದೇಶೀಯವಾಗಿ ನಿರ್ಮಿತವಾಗಿರುವ ಗನ್ ಬಳಸಲಾಗಿದ್ದು, ಹಲವು ಕೈದಿಗಳ ವಿಚಾರಣೆ ನಡೆಸಿದ ಅಧಿಕಾರಿಗಳು ತುರ್ತಾಗಿ ಅಲ್ಲಿಂದ ತೆರಳಿದರು. ಜೊತೆಗೆ ಇನ್ನೂ ಹಲವು ಜೈಲುಗಳಿಗೆ ಭೇಟಿ ನೀಡಿ ಅಧಿಕಾರಿಗಳ ತಂಡ ಎಂ ಎಂ ಕಲಬುರ್ಗಿ ಮತ್ತು ಗೌರಿ ಹತ್ಯೆಗೆ ಒಂದೇ ಮಾದರಿಯ ಪಿಸ್ತೂಲ್ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಶಸ್ತ್ರಸ್ತ್ರ ಕಾಯ್ದೆಯಡಿ ಬಂಧಿತರಾಗಿರುವ ಅತಿ ಹೆಚ್ಚು ಮಂದಿ ಕೈದಿಗಳು ವಿಜಯಪುರ ಜೈಲಿನಲ್ಲಿದ್ದಾರೆ, ಪ್ರತಿ ವರ್ಷ ಸುಮಾರು 20ರಿಂದ 30 ಕೇಸುಗಳು ದಾಖಲಾಗುತ್ತವೆ. ಪೊಲೀಸರು ಕೆಲ ಸುಧಾರಿತ ನಕ್ಸಲ್ ನಾಯಕರನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದಾರೆ. 
SCROLL FOR NEXT