ಬೆಂಗಳೂರು: ಸುಂದರ ಮತ್ತು ಸುಸಜ್ಜಿತ ಕ್ಯಾಂಪಸ್ ಹೊಂದಿರುವ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಚ್ಛತಾ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ರಾಜ್ಯದ ಕೆಎಲ್ ಇ ವಿದ್ಯಾಸಂಸ್ಥೆ ಸ್ಥಾನ ಪಡೆದಿದೆ.
ಕೇಂದ್ರ ಮಾನವ ಸಂಪನ್ಮೂಲ ನೀಡುವ ಸ್ವಚ್ಛತಾ ರ್ಯಾಂಕಿಂಗ್ ಗೆ ಬೆಳಗಾವಿಯ ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಭಾಜನವಾಗಿದೆ. 25 ರಲ್ಲಿ ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು 12 ರ್ಯಾಂಕಿಂಗ್ ಅನ್ನು ತಮ್ಮದಾಗಿಸಿಕೊಂಡಿವೆ.
ವಿದ್ಯಾರ್ಥಿಗಳು ಶೌಚಗೃಹದ ಸರಾಸರಿ, ಅಡುಗೆ ಕೋಣೆ ಸ್ವಚ್ಛತೆ, ಹರಿಯುವ ನೀರಿನ ಲಭ್ಯತೆ, ಶೌಚಗೃಹ ಮತ್ತು ಅಡುಗೆ ಕೋಣೆಯಲ್ಲಿ ಆಧುನಿಕ ವಸ್ತುಗಳು, ಕ್ಯಾಂಪಸ್ನಲ್ಲಿನ ಹಸಿರಿನ ಪ್ರಮಾಣ, ವಸತಿಗೃಹ ಮತ್ತು ಶೈಕ್ಷಣಿಕ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಅನುಸರಿಸಲಾಗುತ್ತಿರುವ ತಂತ್ರ, ನೀರು ಪೂರೈಕೆ ವ್ಯವಸ್ಥೆ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ತೊಡಗಿಸಿಕೊಂಡಿರುವುದನ್ನು ಆಧರಿಸಿ ರ್ಯಾಂಕಿಂಗ್ ನೀಡಲಾಗುತ್ತದೆ. ಎಂಎಚ್ಆರ್ಡಿ ಆಹ್ವಾನದ ಮೇರೆಗೆ ದೇಶದ 3,500 ಎಚ್ಇಐಗಳು ಅರ್ಜಿ ಸಲ್ಲಿಸಿದ್ದವು.