ಸಹೋದರಿಯೊಂದಿಗೆ ಸಂಬಂಧದ ಆರೋಪ: ಗುಪ್ತಾಂಗ ಕತ್ತರಿಸಿ, ವ್ಯಕ್ತಿಯ ಶಿರಚ್ಛೇದನ ಮಾಡಿದ್ದ ಸಹೋದರರ ಬಂಧನ
ವಿವಾಹವಾಗದ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನ ಗುಪ್ತಾಂಗ ಕತ್ತರಿಸಿ, ಶಿರಚ್ಛೇದನ ಮಾಡಿದ್ದ ಸಹೋದರರನ್ನು ಬಂಧಿಸಲಾಗಿದೆ.
ಬೆಂಗಳೂರು: ವಿವಾಹವಾಗದ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನ ಗುಪ್ತಾಂಗ ಕತ್ತರಿಸಿ, ಶಿರಚ್ಛೇದನ ಮಾಡಿದ್ದ ಸಹೋದರರನ್ನು ಬಂಧಿಸಲಾಗಿದೆ.
ಒಡಿಶಾದ ಗಾಂಧಿ ಜೆರೋಯ್ (19) ಹಾಗೂ ಮಧು ಜೆರೋಯ್ (21) ಬಂಧಿತ ಸಹೋದರರಾಗಿದ್ದು ಬಿರಂಚಿ ಮಂಝಿ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದರ ಆರೋಪ ಎದುರಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಬ್ಬರೂ ಸಹೋದರರು ಬಿರಂಚಿ ಮಂಝಿಯೊಂದಿಗೆ ವಾಸವಿದ್ದರು. ಕೆಲವು ತಿಂಗಳ ಹಿಂದೆ ತಮ್ಮ ಸಹೋದರಿಯೊಂದಿಗೆ ಬಿರಂಚಿ ಮಂಝಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದಿದೆ. ಸಹೋದರರು ಮಂಝಿಯನ್ನು ಸೆ.10 ರಂದು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.