ರಾಜ್ಯ

ಗೌರಿ ಹತ್ಯೆ ತನಿಖೆ: ಬಲ ಪಂಥೀಯ ಸಂಘಟನೆಗಳ ಕಚೇರಿಗೆ ಎಸ್ಐಟಿ ಭೇಟಿ; ದಾಖಲೆಗಳ ಪರಿಶೀಲನೆ

Shilpa D
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿರುವ ಬಲಪಂಥೀಯ ಸಂಘಟನೆಗಳ ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಶುಕ್ರವಾರ ಕಚೇರಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕೆಲವು ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸ್ ಐಟಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದೆ. ಗೌರಿ ಹತ್ಯೆಗೆ ಬಳಸಿರುವಂತಹ ಗನ್ ಹಾಗೂ ಕಲ್ಬುರ್ಗಿ ಹತ್ಯೆಗೆ ಬಳಸಿರುವ ಗನ್ ನಲ್ಲಿ ಸಾಮ್ಯತೆಯಿದೆ, ಆದರೆ ಎರಡು ಗನ್ ಗಳು ಒಂದೇ ಎಂದು ಹೇಳಲಾಗುವುದಿಲ್ಲ ಎಂದು ಎಫ್ ಎಸ್ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಜೊತೆಗೆ ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಅವರ ಹತ್ಯೆಗೂ ಇದೇ ಮಾದರಿಯ ಗನ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಲಪಂಥೀಯ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಕೆಲ ನಾಯಕರನ್ನು ಭೇಟಿ ಮಾಡಲು ಮಹಾರಾಷ್ಟ್ರಕ್ಕೆ ತಂಡವೊಂದನ್ನು ಕಳುಹಿಸಲಾಗಿದೆ.
ಇನ್ನೂ ಗೌರಿ ಹತ್ಯೆಯಲ್ಲಿ ಎಡ ಪಂಥೀಯ ಸಂಘಟನೆಗಳ ಕೈವಾಡವಿದೆ ಎಂಬ ಮಾತುಗಳನ್ನು ಅಲ್ಲಗಳೆಯದ ಎಸ್ ಐಟಿ ನಾಪತ್ತೆಯಾಗಿರುವ ನಕ್ಸಲ್ ನಾಯಕ ವಿಕ್ರಮ್  ಗೌಡನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗೌರಿ ಲಂಕೇಶ್ ಇಬ್ಬರು ನಕ್ಸಲರನ್ನು ಶರಣಾಗಿಸಿ ಸಮಾಜಾದ ಮುಖ್ಯ ವಾಹಿನಿಗೆ ತರಲು ಯತ್ನಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ವಿಕ್ರಮ್ ಗೌಡ ಗೌರಿ ಮೇಲೆ ಧ್ವೇಷ ಸಾಧಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಇದುವರೆಗೂ ಎಸ್ ಐಟಿ 100 ಕ್ಕೂ ಮಂದಿ ಗೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ, ಗಾರಿ ನಿವಾಸದ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ 48 ಗಂಟೆಗಳ ಕಾಲ ಒಡಾಡಿದ್ದವರ ವಿಚಾರಣೆ ಕೂಡ ನಡೆಸಲಿದೆ. 
ಇದೇ ವೇಳ್ ಖ್ಯಾತ ರೌಡಿ ಕುಣಿಕಲ್ ಗಿರಿ ಸ್ವತಃ ತಾನಾಗಿಯೇ  ಪೊಲೀಸ್ ಠಾಣೆಗೆ ಬಂದು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿ ಹೋಗಿದ್ದಾನೆ.
SCROLL FOR NEXT