ರಾಜ್ಯ

ಗೌರಿ ಲಂಕೇಶ್ ಮರ್ಡರ್ ಕೇಸ್: ಹತ್ಯೆಗೆ ಬಳಸಿದ್ದ ಬುಲೆಟ್ಸ್ ತಯಾರಾಗಿದ್ದು ಮಹಾರಾಷ್ಟ್ರದಲ್ಲಿ!

Shilpa D
ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ ಬುಲೆಟ್ಸ್ ತಯಾರಾಗಿದ್ದು ಮಹಾರಾಷ್ಟ್ರದ ಪುಣೆಯ ಬಳಿಯ ಕಾಡ್ಕಿಯಲ್ಲಿ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು ಕಂಟೋನ್ಮೆಂಟ್ ಸಿಟಿಗೆ ತೆರಳಿದ್ದಾರೆ. ಬುಲೆಟ್ ತಯಾರಾಗಿರುವುದು ಕಾಡ್ಕಿಯಲ್ಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ  ದೃಢಪಟ್ಟ ಮೇಲೆ ಅಧಿಕಾರಿಗಳ ತಂಡವೊಂದು ಮಹಾರಾಷ್ಟ್ರಕ್ಕೆ ಬಂದಿಳಿದಿದೆ. 
ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬುಲೆಟ್ ಹಾಗೂ ಕಾಟ್ರಿಜ್ ಪರಿಶೀಲನೆಯಿಂದ ಅದು ತಯಾರಾದ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದೆ, ಹೀಗಾಗಿ ಮತ್ತಷ್ಟು ಸುಳಿವು ಸಿಗುವ ಸಾಧ್ಯತೆಯಿದೆ ಎಂದು ಎಸ್ ಐಟಿ ತಿಳಿಸಿದೆ.
ಇನ್ನೂ ಹತ್ಯೆಯಲ್ಲಿ ಬಲ ಪಂಥೀಯರ ಕೈವಾಡದ ಸಾಧ್ಯತೆಯಿದೆ ಎಂದು ಎಸ್ ಐಟಿ ಹೇಳಿದೆ. ಕೆಲ ತಿಂಗಳುಗಳ ಹಿಂದೆ ಆಂಧ್ರ ಪ್ರದೇಶದ ಅಮರಾವತಿಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಬಲ ನಕ್ಸಲರು ಭಾಗಿಯಾಗಿದ್ದರು. ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ಕರೆ ತರುವ ಸಲುವಾಗಿ ಸಭೆ ಆಯೋಜಿಸಲಾಗಿತ್ತು.
ಐವರು ನಕ್ಸರು ಶರಣಾಗತಿ ಬಯಸಿದ್ದರು. ಆದರೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಬೇಕೆಂದು ಷರತ್ತು ವಿಧಿಸಲಾಗಿತ್ತು, ಆದರೆ ಕರ್ನಾಟಕ ಸರ್ಕಾರ ಈ ಷರತ್ತನ್ನು ನಿರಾಕರಿಸಿತ್ತು. ಇದರಿಂದಾಗಿ ನಕ್ಸಲರ ಗುಂಪೊಂದು ಗೌರಿ ಲಂಕೇಶ್ ವಿರುದ್ಧ ಆಕ್ರೋಶ ಗೊಂಡು  ಸಭೆ ರದ್ದು ಪಡಿಸಿತ್ತು. ವಾಪಸ್ ಬಂದ ಗೌರಿ ಸಿಎಂ ಜೊತೆಗೆ ಚರ್ಚೆಗೆ ಸಮಯ ಕೋರಿದ್ದರು, ಆದರೆ ಅದಾದ ಕೆಲ ದಿನಗಳಲ್ಲಿ ಆಕೆಯ ಕೊಲೆಯಾಯಿತು ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ವಿಶೇಷ ತನಿಖಾ ತಂಡ ಮಾಜಿ ರೌಡಿ ಅಗ್ನಿ ಶ್ರೀಧರ್ ಅವರನ್ನು ಭೇಟಿ ಮಾಡಿ ವಿಚಾರಣೆ ನಡೆಸಿದ್ದಾರೆ.
SCROLL FOR NEXT