ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅಕ್ಟೋಬರ್ 6 ರಂದು ವಿಧಾನ ಸೌಧದಲ್ಲಿ ನಡೆಯಲಿರುವ, ವಿಧಾನ ಸೌಧ ನಿರ್ಮಾಣದ 60 ನೇ ವರ್ಷಾಚರಣೆಯಲ್ಲಿ ಕಾರ್ಯಕ್ರಮ ನೀದಲಿದ್ದಾರೆ.
ಈ ಮೂಲಕ ದೇಶದ ಶಾಸನಸಭೆ ಆವರಣ ಒಂದರಲ್ಲಿ ಕಾರ್ಯಕ್ರಮ ನೀದುವ ಪ್ರಥಮ ಭಾರತೀಯರಾಗುವರು.
"ವಿಧಾನ ಸೌಧ (ಕರ್ನಾಟಕದ ರಾಜ್ಯ ಶಾಸನಸಭೆ) ದಲ್ಲಿ ಕಾರ್ಯಕ್ರಮ ನೀಡುವುದು ನನ್ನ ಕನಸು .ಮಕ್ಕಳಾಗಿದ್ದಾಗ, ಈ ಭವ್ಯವಾದ ಕಟ್ಟಡ ನೋಡಲು ನನ್ನ ತಂದೆಯೊಂದಿಗೆ ನಾನು ಇಲ್ಲಿ ಕಳೆಯುವ ಒಂದೊಂದು ಕ್ಷಣವನ್ನೂ ಆನಂದದಿಂದ ಅನುಭವಿಸುತ್ತೇನೆ" ಎಂದು ರಿಕಿ ಸುದ್ದಿಗಾರರೊಂದಿಗೆ ಹೇಳಿದರು.
"ಈಗ ನನ್ನ ಕನಸು ನನಸಾಗಿದೆ. ವಿಧಾನ ಸೌಧದ ಆವರಣದಲ್ಲಿ ಕಾರ್ಯಕ್ರಮ ನೀಡುವುದು ನನಗೆ ಗೌರವಕ್ಕೆ ಕಾರಣವಾಗಿದೆ. ನನಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ಶಾಸನ ಸಭೆಯ ಸಭಾಧ್ಯಕ್ಷ ಡಿ.ಹೆಚ್. ಶಂಕರ್ಮೂರ್ತಿ ಮತ್ತು ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದಗಳು" ಎಂದು ಹೇಳಿದರು.
ಗ್ರ್ಯಾಮಿ ಪ್ರಶಸ್ತಿ ಗಳಿಸಿದ ಬಳಿಕ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ತಂದರು.
"ಪ್ರಧಾನಿ ಮೋದಿ ಭೇಟಿಯು ಜೀವನದ ಉನ್ನತ ಕ್ಷಣದಲ್ಲಿ ಒಂದು. 45 ನಿಮಿಷ ದಿಂದ ಒಂದು ಗಂಟೆ ಕಾಲ ಅವರೊಡನೆ ಚರ್ಚೆ ನಡೆಸುವಾಗ, ಪರಿಸರ ಸಂರಕ್ಷಣೆಗೆ ಪೂರಕವಾಗಿ ಸಂಗೀತ ಸಂಯೋಜನೆಗಾಗಿ ನನ್ನ ಸಂಪೂರ್ಣ ಜೀವನವನ್ನು ಸಮರ್ಪಿಸಬೇಕೆಂದು ಅವರು ಸಲಹೆ ನೀಡಿದ್ದರು" ಎಂದು ರಿಕಿ ಹೇಳಿದರು.
ಜುಲೈನಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಭಾಂಗಣದಲ್ಲಿ ರಿಕಿ ಕೇಜ್ ಮೊದಲ ವಾರ್ಷಿಕ ಎನ್ ಓ ವಿಯುಎಸ್ ಶೃಂಗಸಭೆಯ ಉದ್ಘಾಟನಾ ಸಮಾರಂಬದಲ್ಲಿ ಸಂಗೀತ ಪ್ರದರ್ಶನ ನೀಡಿದ್ದರು.
ಕೇಜ್, ಒಬ್ಬ ಪ್ರಸಿದ್ಧ ಪರಿಸರವಾದಿ ಆಗಿದ್ದು, ಅಕ್ಟೋಬರ್ 2 ರಿಂದ ಅಕ್ಟೋಬರ್ 11 ರವರೆಗೆ ಪರಿಸರಕ್ಕೆ ಸಂಬಂಧಿಸಿದ ರೌಂಡ್ ಗ್ಲಾಸ್ ಸಂಸಾರ ಫೆಸ್ಟಿವಲ್ 2017 ನಡೆಸುವುದಾಗಿ ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos