ಎನ್ ಡಿ ಆರ್ ಎಫ್ ನಿಂದ ರಕ್ಷಿಸಲ್ಪಟ್ಟ ಕುರಿಗಾಹಿಗಳು 
ರಾಜ್ಯ

ಬೆಳಗಾವಿ: ಕೃಷ್ಣಾನದಿ ದ್ವೀಪದಲ್ಲಿ ಸಿಲುಕಿದ ಮೂವರು ಕುರಿಗಾಹಿಗಳ ರಕ್ಷಣೆ

ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿದ್ದ ಮೂವರು ಕುರಿಗಾಹಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ...

ಬೆಳಗಾವಿ/ ಯಾದಗಿರಿ: ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿದ್ದ ಮೂವರು ಕುರಿಗಾಹಿಗಳನ್ನು  ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಿಸಿದೆ.
ಸೋಮನಗೌಡ, ಶೇಖರಪ್ಪ, ಗಡ್ಡೆಪ್ಪ ಅವರನ್ನು ರಕ್ಷಿಸಲಾಗಿದೆ. ಸೋಮವಾರದಿಂದ ಈ ಮೂವರು ಸುರಪುರ ದ್ವೀಪದಲ್ಲಿ ತಮ್ಮ 80 ಕುರಿಗಳ ಜೊತೆ ಸಿಲುಕಿಕೊಂಡಿದ್ದರು.
ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಮೇಲಿನಗಡ್ಡಿ ಗ್ರಾಮದ ಮೂರು ಕುರಿಗಾಹಿಗಳು ಮತ್ತು ಅವರ 80 ಕುರಿಗಳು ದ್ವೀಪದಲ್ಲೇ ಸಿಲುಕಿಕೊಂಡಿದ್ದರು. ಮಾರನೇ ದಿನ ನೀರಿನ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಿದ್ದರು, ಆದರೆ ಮತ್ತೆ ಹೊರ ಹರಿವು ಹೆಚ್ಚಾದ ಪರಿಣಾಮ ಅವರು ವಾಪಸ್ ಬರಲು ಸಾಧ್ಯವಾಗಲಿಲ್ಲ,
ಮೂವರು ಕುರಿಗಾಹಿಗಳು ಕುರಿಯ ಹಾಲು ಕುಡಿದು ಬದುಕಿದ್ದರು, ಕಲ್ಲುಗಳ ನಡುವೆ ತಮ್ಮ ಟವೆಲ್ ಹಾಸಿಕೊಂಡು ಅಲ್ಲಿಯೇ ಮಲಗಿದ್ದರು. ನಂತರ ನೀರಿನ ಪ್ರವಾಹ ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಮೂವರು ಮೊಬೈಲ್ ಮೂಲಕ ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದರು. ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ. ಗುರುವಾರ ಹೈದರಾಬಾದ್ ನ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಆರಂಭಿಸಿ ಮೂವರನ್ನು ರಕ್ಷಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!