ರಾಜ್ಯ

ಬೆಂಗಳೂರು ಕಿಡ್ನ್ಯಾಪ್ ಪ್ರಕರಣ: ಅಪಹರಣವಾದ ರಾತ್ರಿಯೇ ಯುವಕನ ಹತ್ಯೆ!

ಅಪಹರಣಕ್ಕೊಳಗಾದ ರಾತ್ರಿಯೇ ಯುವಕನನ್ನು ಹತ್ಯೆ ಮಾಡಿ ದೇಹಹ್ವನ್ನು ಕೆರೆಗೆ ಎಸೆಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ಐಟಿ ಅಧಿಕಾರಿಯ ಪುತ್ರ ಶರತ್ ಕೊಲೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ, ಹತ್ಯೆಯಾದ ಯುವಕನ ಸಹಪಾಠಿ ವಿಶಾಲ್ ಮಹತ್ವದ ಮಾಹಿತಿ ನೀಡಿದ್ದು ಅಪಹರಣಕ್ಕೊಳಗಾದ ರಾತ್ರಿಯೇ ಯುವಕನನ್ನು ಹತ್ಯೆ ಮಾಡಿ ದೇಹಹ್ವನ್ನು ಕೆರೆಗೆ ಎಸೆಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 
ಸೆ.12 ರಂದು ಸ್ನೇಹಿತರಿಗೆ ತನ್ನ ಹೊಸ ಬೈಕ್ ನ್ನು ತೋರಿಸಲು ಹೋಗಿದ್ದ ಮುನೇಶ್ವರ ನಗರದ ನಿವಾಸಿ ಶರತ್  ಅಪಹರಣ ಮಾಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಆರ್ ಟಿಒ ಏಜೆಂಟ್, ವಿದ್ಯಾರ್ಥಿ ಹೆಚ್ ಪಿ ವಿಶಾಲ್ (21) ಡ್ರೈವರ್ ವಿನಯ್ ಪ್ರಸಾದ್ (24) ಕರಣ್ ಪೈ(22) ಕೈಗಾರಿಕೆಯ ನೌಕರ, ಮತ್ತೋರ್ವ ನಿರುದ್ಯೋಗಿ ಯುವಕ ವಿನೋದ್ ಕುಮಾರ್ (24) ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 
ಹತ್ಯೆಯಾಗಿದ್ದ ಶರತ್ ನ ಹೊಸ ಬೈಕ್ ವಿಶಾಲ್ ನ ಸಂಬಂಧಿ ವಿಕಾಸ್ ಮನೆಯಾಲ್ಲಿ ಪತ್ತೆಯಾಗಿತ್ತು, ಆದರೆ ಆತನ ಮನೆಯಲ್ಲಿ ಬೈಕ್ ಪಾರ್ಕ್ ಮಾಡುವಾಗ ಘಟನೆಯ ಬಗ್ಗೆ ವಿಶಾಲ್ ಮಾಹಿತಿ ನೀಡಿರಲಿಲ್ಲ. ಹತ್ಯೆ ಮಾಡಿದ ಗ್ಯಾಂಗ್ ಶರತ್ ನ ಪೋಷಕರಿಂದ 50 ಲಕ್ಷ ರೂಪಾಯಿ ಪಡೆಯಲು ಯೋಜನೆ ರೂಪಿಸಿದ್ದರು. ಸೆ.12 ರಂದು ಶರತ್ ನ ಕುಟುಂಬದವರನ್ನು ಭೇಟಿ ಮಾಡಿದ್ದ ವಿಶಾಲ್ ಗೆ ಶರತ್ ನ ಪೋಷಕರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ ಎಂಬುದು ತಿಳಿಯಿತು. ನಂತರ ಶರತ್ ನ್ನು ಹತ್ಯೆ ಮಾಡಲು ವಿಶಾಲ್ ನಿರ್ಧರಿಸಿ ಸ್ವಿಫ್ಟ್ ಕಾರಿನಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿ ದೇಹವನ್ನು ನರಸಿಂಹಯ್ಯನ ಕೆರೆಗೆ ಎಸೆದಿದ್ದಾರೆ. ಒಂದೆರಡು ದಿನಗಳು ಕಳೆದ ನಂತರ ದೇಹ ತೇಲಲು ಪ್ರಾರಂಭವಾಗಿದ್ದನ್ನು ಕಂಡು ಕೊಳೆತ ದೇಹವನ್ನು ಮತ್ತೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ರಾಮೋಹಳ್ಳಿ ಕೆರೆಯ ಬಳಿ ಇರುವ ಕುರುಬರಪಾಳ್ಯದಲ್ಲಿ ಸಮಾಧಿ ಮಾಡಿದ್ದರು ಎಂದು ತಿಳಿದುಬಂದಿದೆ. ಹತ್ಯೆ ಮಾಡಿದ ಗ್ಯಾಂಗ್ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. 
ಶರತ್ ನ ತಂದೆ ಐಟಿ ಅಧಿಕಾರಿಯಾದ್ದರಿಂದ ಬೈಕ್ ನಂತಹ ಐಷಾರಾಮಿ ವಸ್ತುಗಳನ್ನು ಅವರ ತಂದೆಯಿಂದ ಪಡೆಯಬಹುದು ಎಂದು ಆಲೋಚಿಸಿದ್ದ ವಿಶಾಲ್ ಶರತ್ ನ್ನು ಅಪಹರಿಸಲು ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT