ರಾಜ್ಯ

ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮಹಿಳೆಯ ರಕ್ಷಣೆ

Raghavendra Adiga
ಉಡುಪಿ: ಕಳೆದ 15 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಆಪತ್ತಿನಲ್ಲಿ ಸಿಲುಕಿದ್ದ ಕಾರ್ಕಳ ಮೂಲದ ಮಹಿಳೆ ಒಬ್ಬರನ್ನು ನೆನ್ನೆ ಅಂತಿಮವಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಯಿತು.
42 ವರ್ಷ ವಯಸ್ಸಿನ ಮಹಿಳೆ ಜಿಸಿಂತಾ ರನ್ನು  ಉಡುಪಿ ಮಾನವ ಹಕ್ಕುಗಳ ರಕ್ಷಣಾ ವೇದಿಕೆ (ಎಚ್ ಆರ್ ಪಿ ಎಫ್) ಅಧ್ಯಕ್ಷ ರವೀಂದ್ರನಾಥ ಶಾನಭಾಗ, ಮತ್ತು ಜೆಡ್ಡಾದ ಎನ್ ಆರ್ ಐ ಸಂಸ್ಥೆಗಳು ಜಂಟಿಯಾಗಿ ಸೌದಿ ಅರೇಬಿಯಾದ ಯಾನ್ಬು ನಲ್ಲಿ ಅವಳ ಯಜಮಾನನಾಗಿದ್ದ ಅಬ್ದುಲ್ ಅಲ್ಮುತೇರಿ ಇಂದ ಬಿಡುಗಡೆ ಮಾಡಿದ್ದಾರೆ.
ಜಸಿಂತ ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗಿದ್ದರು. ಪತಿಯ ಮರಣದ ನಂತರ, ಆಕೆ ಮುಂಬೈ ಮೂಲದ ವಿದೇಶದಲ್ಲಿ ಉದ್ಯೋಗ ಕೊಡಿಸುವ ಮದ್ಯವರ್ತಿ ಸಂಸ್ಥೆ ಯ ಪ್ರತಿನಿಧಿ ಜೇಮ್ಸ್ ನ್ನು ಸಂಪರ್ಕಿಸಿದರು.  
ಜೇಮ್ಸ್ ಜಸಿಂತ ಗೆ ಮುಂಬೈಯಲ್ಲಿ ಶಾಬಾಕಾನ್ ಎನ್ನುವವರನ್ನು ಭೇಟಿ ಆಗುವಂತೆ ನಿರ್ದೇಶನ ನೀಡಿದ್ದ. ಇಬ್ಬರೂ ಸಹ ಕತಾರ್ ನಲ್ಲಿ ನೆಲೆಸಿದ ಭಾರತೀಯ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವ ಕೆಲಸ ಕೊಡಿಸುವುದಾಗಿ ಆಕೆಗೆ ಭರವಸೆ ನೀಡಿದ್ದರು.
ಪಾಸ್ ಪೋರ್ಟ್ ಮತ್ತು ವೀಸಾಗಳಿಗಾಗಿ ಅವರು ಶುಲ್ಕವನ್ನು ಸಂಗ್ರಹಿಸದ ಕಾರಣ, ಜಿಸಿಂತಾ ಅವರ ಮಾತನ್ನು ನಂಬಿದ್ದರು ಜೂನ್ 19, 2016 ರಂದು ಮಧ್ಯಪ್ರಾಚ್ಯಕ್ಕೆ ಪ್ರಯಾಣ ಬೆಳೆಸಿದರು.
ಅಲ್ಲಿ ಆಕೆ ಸೌದಿ ಉದ್ಯೋಗದಾತದ 10 ಮಕ್ಕಳನ್ನು ನೋಡಿಕೊಳ್ಳಬೇಕಾಗಿತ್ತು, ದಿನದ 16 ಗಂಟೆ ದುಡಿತದಿಂದ. ಆಕೆ ಆರೋಗ್ಯವು ಹದಗೆಟ್ಟಿತು ಆಕೆಯ ಬಗ್ಗೆ ಯಾವ ಕರುಣೆಯನ್ನೂ ತೋರದ ಯಜಮಾನ ಅವಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು.
ಜಸಿಂತಾರ  ಯಜಮಾನ,  ಅಬ್ದುಲ್ ಹೇಳಿಕೆ ಪ್ರಕಾರ, ಆಕೆಯನ್ನು ಸೌದಿ ಅರೇಬಿಯಾಗೆ ಕಳುಹಿಸಿದ ಏಜೆಂಟರು ಅಬ್ದುಲ್  ರಿಂದ 24,000 ಸೌದಿ ರಿಯಾಲ್ ಗಳನ್ನು ತೆಗೆದುಕೊಂಡಿದ್ದಾರೆ. ತಮ್ಮ ಹಣವನ್ನು ಹಿಂದಿರುಗಿಸಿದರೆ ಜಿಸಿಂತಾಗೆ ಭಾರತಕ್ಕೆ ಮರಳಲು ಒಪ್ಪಿಗೆ ನೀಡುತ್ತೇನೆ ಎಂದಿದ್ದರು
ಎಚ್ ಆರ್ ಪಿ ಎಫ್ ಇದನ್ನು ವಲಸೆಗಾರರ ರಕ್ಷಣಾ ಜನರಲ್, ಎಂ ಸಿ ಲೂಥರ್ ಗೆ ತಿಳಿಸಿದಾಗ ಅವರು ವಿಚಾರಣೆಗೆ ಆದೇಶಿಸಿದರು. ಈ ವಿಷಯದಲ್ಲಿ ಎಚ್.ಆರ್.ಪಿ.ಎಫ್ ಸುಷ್ಮಾ ಸ್ವರಾಜ್ ಅವರನ್ನು ಕೂಡಾ ಸಂಪರ್ಕಿಸಿತ್ತು.
ರವಿಂದ್ರನಾಥ್ ಶಾನಭಾಗ್ ಇಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸೌದಿ ಅರೇಬಿಯದಲ್ಲಿ ಎನ್ ಆರ್ ಐ ಸಂಘಗಳು ಜಸಿಂತಾ ತನ್ನ ಯಜಮಾನನಿಗೆ ಪಾವತಿಸಲು 4.5 ಲಕ್ಷ ರೂ.ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ
ನಿನ್ನೆ ಸಂಜೆ ಜಕಿಂತಾ ರನ್ನು ಭಾರತಕ್ಕೆ ಮರಳಿ ಕರೆತರಲಾಯಿತು. ಈಅಗ ಆಕೆ ವೈದ್ಯಕೀಯ ಪರೀಕ್ಷೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಶಾನಬಾಗ್ ವಿವರಿಸಿದರು.
SCROLL FOR NEXT