ರಾಜ್ಯ

ಕೆಎಸ್ಐಸಿ ಅಧಿಕಾರಿ ವಜಾ ಪ್ರಕರಣ: ಪುನರ್ ನೇಮಕ ಮಾಡಿಕೊಳ್ಳುವಂತೆ ರೇಷ್ಮೆ ನಿಗಮಕ್ಕೆ ಹೈ ಕೋರ್ಟ್ ಸೂಚನೆ

Raghavendra Adiga
ಬೆಂಗಳೂರು: ರಾಜ್ಯ ಸ್ವಾಮ್ಯದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್ಐಸಿ) 49 ವರ್ಷದ ಸಹಾಯಕ ಮಾರಾಟ ಅಧಿಕಾರಿ (ಎಎಸ್ಒ) ಸಂಸ್ಥೆಯ ವಿರುದ್ಧ ದ ಕಾನೂನು ಸಮರದಲ್ಲಿ ಜಯ ಸಾಧಿಸಿದ್ದಾರೆ. 
ನಿಗಮದ ಮಾರಾಟ ಅಧಿಕಾರಿ ವೈ ಎನ್ ಕೃಷ್ಣಮೂರ್ತಿ ಕರ್ನಾಟಕ ಹೈ ಕೋರ್ಟ್ ನಲ್ಲಿ  ತಮ್ಮ ಪ್ರಕರಣವನ್ನು ತಾವೇ ವಾದಿಸಿ ಜಯಿಸಿದ್ದಾರೆ. ಇವರು ತಮ್ಮ ಐದನೇ ಸುತ್ತಿನ ದಾವೆಯಲ್ಲಿ ಯಶಸ್ವಿಯಾದರು. 
ಈ ಪ್ರಕರಣದಲ್ಲಿ, ನ್ಯಾಯಾಲಯವು ಕೆಎಸ್ಐಸಿ ತನ್ನ ನಿಯಮ ಬಾಹಿರವಾಗಿ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡುವ ಮೂಲಕ ಅವರಿಗೆ ನಅನ್ಯಾಯವೆಸಗಿದೆ ಎಂದಿದೆ. ಸಪ್ಟೆಂಬರ್ 20ರ ತೀರ್ಪಿನಲ್ಲಿ, ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಕೆಎಸ್ಐಸಿ ಗೆ ಕೃಷ್ಣ ಮೂರ್ತಿ ಅವರನ್ನು  ಮತ್ತೆ ಸಂಸ್ಥೆಗೆ ಸೇರಿಸಿಕೊಳ್ಳಲು ನಿರ್ದೇಶನ ನೀಡಿದರು. ಕೃಷ್ಣಮೂರ್ತಿ ಸಂಸ್ಥೆಯ ಸೇವೆಯಲ್ಲಿ ಮುಂದುವರಿಯಲು ಅರ್ಹರಾಗಿದ್ದಾರೆ ಎಂದು ಹೇಳಿದರು. 
ಆದಾಗ್ಯೂ, ಕಳೆದ ಐದು ವರ್ಷಗಳಿಂದ ಕೃಷ್ಣಮೂರ್ತಿ ಸೇವೆಯಲ್ಲಿ ಇಲ್ಲದ ಕಾರಣ, ಅವರ ಹಿಂದಿನ ವೇತನದಲ್ಲಿ ಕೇವಲ ಶೇ.50ರಷ್ಟು ಮಾತ್ರ ಪಡೆಯಲು ಅರ್ಹರಾಗುತ್ತಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಕೃಷ್ಣಮೂರ್ತಿಗೆ ಅನ್ಯಾಯವಾಗಿದ್ದ ಕಾರನ, ಕೆಎಸ್ಐಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು 25,000 ರೂ.ಯನ್ನು ಕೃಷ್ಣಮೂರ್ತಿಗೆ ಪಾವತಿಸುವಂತೆ ನಿರ್ದೇಶಿಸಲಾಗಿದೆ. ಆದರೆ ಅಗತ್ಯವಿದ್ದಲ್ಲಿ ಕೆಎಸ್ಐಸಿ ಅಧಿಕಾರಿಯ ವಿರುದ್ಧ ಇಲಾಖೆ ಮಟ್ಟದ ವಿಚಾರಣೆ ನಡೆಸಲು ಮುಕ್ತ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಇದು ಕಾನೂನು ಚೌಕಟ್ಟಿಗೆ ಒಳಪಟ್ಟಿರಬೇಕು"ಎಂದು ನ್ಯಾಯಾಧೀಶರು ಹೇಳಿದರು.
ಅರ್ಜಿದಾರರ ಸಂಕಟ
ವೈ ಎನ್ ಕೃಷ್ಣಮೂರ್ತಿ ವ್ಸೆಪ್ಟೆಂಬರ್ 11, 1987 ರಂದು ಬೆಂಗಳೂರಿನ ಕೆಎಸ್ಐಸಿ ಸಹಾಯಕ ಮಾರಾಟ ಅಧಿಕಾರಿ ಆಗಿ ನೇಮಕಗೊಂಡಿದ್ದರು. ಅವರ ಪ್ರೊಬೆಷನರಿ ಅವಧಿಯನ್ನು 1994 ರವರೆಗೂ ವಿಸ್ತರಿಸಲಾಯಿತು ಆದರೆ ಆ ಅವಧಿಯಲ್ಲಿ ಅವರ ಸೇವೆ ತೃಪ್ತಿಕರವಾಗಿಲ್ಲ, ಅಥವಾ ಇನ್ನಾವುದೇ ಕಾರಣ ನೀಡಿರಲಿಲ್ಲ. ಬಳಿಕ ಅವರನ್ನು ಮಾರ್ಚ್ 1994, ಆಗಸ್ಟ್ 1997, ಮಾರ್ಚ್, 2006 ಮತ್ತು ಜುಲೈ 11, 2012 ರಂದು ಸೇವೆಯಿಂದ ಯಾವುದೇ ಕಾರಣ ನೀಡದೆ ವಜಾ ಮಾಡಲಾಗಿತ್ತು.
SCROLL FOR NEXT